ಮಂಗಳವಾರ, ಜನವರಿ 31, 2023
26 °C

ಪಿಎಫ್‌ಐ ಕಾರ್ಯಕರ್ತನಿಗೆ ಎಫ್ಐಆರ್ ಪ್ರತಿ ನೀಡಿದ ಎನ್ಐಎ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯನ್ನು ನಿಷೇಧಿಸುವ ಮುನ್ನ ಬಂಧಿಸಲಾಗಿದ್ದ ಪಿಎಫ್‌ಐ ಕಾರ್ಯಕರ್ತರೊಬ್ಬರಿಗೆ ತಮ್ಮ ಬಂಧನದ ಹಿಂದಿನ ಕಾರಣ ಕುರಿತು ಮಾಹಿತಿ ಮತ್ತು ಅದಕ್ಕೆ ಸಂಬಂಧಿಸಿದ ಎಫ್‌ಐಆರ್‌ನ ಪ್ರತಿಯನ್ನು ನೀಡಲಾಗಿದೆ ಎಂದು ದೆಹಲಿ ಹೈಕೋರ್ಟ್‌ಗೆ ಸೋಮವಾರ ಎನ್‌ಐಎ ಮಾಹಿತಿ ನೀಡಿದೆ. 

ಇದೀಗ ನಿಷೇಧಕ್ಕೊಳಗಾಗಿರುವ ಪಿಎಫ್‌ಐ ಸಂಘಟನೆಯ ಕಾರ್ಯಕರ್ತ, ಬಂಧಿತರಾಗಿರುವ ಪ್ರತಿ ಕಾರ್ಯಕರ್ತನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನ ಪ್ರತಿ ಒದಗಿಸಬೇಕು ಹಾಗೂ ಎನ್‌ಐಎ ವಿಚಾರಣೆಯ ಕುರಿತು ಮಾಹಿತಿ ನೀಡಬೇಕೆಂದು ಕೋರಿ ವಕೀಲರೊಬ್ಬರ ಮೂಲಕ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. 

ನ್ಯಾಯಮೂರ್ತಿ ಅನೂಪ್ ಕುಮಾರ್ ಮೆಂಡಿರಟ್ಟಾ ಅವರು ಪ್ರಕರಣದ ವಿಚಾರಣೆಯನ್ನು ನವೆಂಬರ್ 11ಕ್ಕೆ ಮುಂದೂಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು