ಗುರುವಾರ , ಡಿಸೆಂಬರ್ 1, 2022
27 °C

ಹಿಂಸಾಚಾರಕ್ಕೆ ಪಿಎಫ್ಐ ಹೊಣೆ: ₹5.2 ಕೋಟಿ ಠೇವಣಿ ಇಡಲು ಸಂಘಟನೆಗೆ ಕೋರ್ಟ್‌ ಸೂಚನೆ

ಪಿಟಿಐ Updated:

ಅಕ್ಷರ ಗಾತ್ರ : | |

ಕೊಚ್ಚಿ: ಸೆ.23ರ ಹಿಂಸಾಚಾರಕ್ಕೆ ನಿಷೇಧಿತ ಸಂಘಟನೆ ಪಿಎಫ್‌ಐ ಹೊಣೆ ಹೊರಬೇಕು ಎಂದು ಹೇಳಿರುವ ಕೇರಳ  ಹೈಕೋರ್ಟ್, ಕೆಎಸ್‌ಆರ್‌ಟಿಸಿ ಮತ್ತು ರಾಜ್ಯ ಸರ್ಕಾರಕ್ಕೆ ಆಗಿರುವ ಹಾನಿಗಾಗಿ ಗೃಹ ಇಲಾಖೆಯಲ್ಲಿ  ₹5.2 ಕೋಟಿ ಠೇವಣಿ ಇಡಬೇಕು ಎಂದು ಗುರುವಾರ ನಿರ್ದೇಶನ ನೀಡಿದೆ.  

2019ರ ಹೈಕೋರ್ಟ್‌ ಆದೇಶದ ಹೊರತಾಗಿಯೂ ಸಂಘಟಕರ ಕಾನೂನು ಬಾಹಿರ ಪ್ರದರ್ಶನ, ರಸ್ತೆತಡೆ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಕ್ರಮಕೈಗೊಂಡಿಲ್ಲ ಎಂದು ಕಳವಳ ವ್ಯಕ್ತಪಡಿಸಿದ ನ್ಯಾಯಾಲಯ, ಹಿಂಸಾಚಾರಕ್ಕೆ ಸಂಬಂಧಿಸಿದ ಎಲ್ಲಾ ಪ್ರಕರಣಗಳಲ್ಲಿ ಪಿಎಫ್‌ಐನ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸತ್ತಾರ್‌ ಅವರನ್ನು ಆರೋಪಿಯನ್ನಾಗಿ ಮಾಡಿದೆ.

ನ್ಯಾಯಮೂರ್ತಿಗಳಾದ ಎ. ಕೆ. ಜಯಶಂಕರನ್ ನಂಬಿಯಾರ್ ಮತ್ತು ಮೊಹಮ್ಮದ್ ನಿಯಾಸ್ ಸಿ. ಪಿ. ಅವರ ಪೀಠವು, ಈ ಪ್ರಕರಣಗಳಲ್ಲಿ ಜಾಮೀನು ಅರ್ಜಿ ಪರಿಗಣಿಸುವಾಗ, ಮ್ಯಾಜಿಸ್ಟ್ರೇಟ್ ಮತ್ತು ಸೆಷನ್ಸ್ ನ್ಯಾಯಾಲಯಗಳು ಆರೋಪಿಗಳಿಂದ ಆಸ್ತಿ ಹಾನಿ, ನಾಶಕ್ಕೆ ಸಂಬಂಧಿಸಿದ ಮೊತ್ತ ಪಾವತಿಸುವಂತೆ ಷರತ್ತು ವಿಧಿಸಬೇಕು ಎಂದೂ ನಿರ್ದೇಶನ ನೀಡಿದೆ.

ರಾಜ್ಯದ ಜನರು ಭಯದಿಂದ ಬದುಕಲು ಸಾಧ್ಯವಿಲ್ಲ. ನಿಗದಿತ ಸಮಯದೊಳಗೆ ಠೇವಣಿ ಹಣ ಜಮಾ ಮಾಡಲು ವಿಫಲವಾದಾಗ, ರಾಜ್ಯ ಸರ್ಕಾರ ಪಿಎಫ್‌ಐನ ಸ್ವತ್ತು, ಆಸ್ತಿಗಳು ಅಲ್ಲದೆ ಸತ್ತಾರ್‌ ಮತ್ತು ಇತರ ಪದಾಧಿಕಾರಿಗಳ ವೈಯಕ್ತಿಕ ಆಸ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಕೂಡ ಕೋರ್ಟ್ ನಿರ್ದೇಶನ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು