ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ಅನುಮೋದನೆ: ಸರ್ಕಾರದ ಜತೆ ಫೈಜರ್‌ ಸಿಇಒ ಚರ್ಚೆ

Last Updated 3 ಮೇ 2021, 9:17 IST
ಅಕ್ಷರ ಗಾತ್ರ

ನವದೆಹಲಿ: ‘ಫೈಜರ್‌ ಸಂಸ್ಥೆಯು ಕೋವಿಡ್‌ ಲಸಿಕೆಗೆ ತ್ವರಿತ ಅನುಮೋದನೆ ಪಡೆದುಕೊಳ್ಳುವ ಕುರಿತು ಭಾರತ ಸರ್ಕಾರದೊಂದಿಗೆ ಚರ್ಚೆ ನಡೆಸುತ್ತಿದ್ದೇವೆ’ ಎಂದು ಫೈಜರ್‌ ಸಿಇಒ ಅಲ್ಬರ್ಟ್‌ ಬೌರ್ಲಾ ಅವರು ಲಿಂಕ್ಡ್‌ಇನ್‌ನಲ್ಲಿ ಸೋಮವಾರ ತಿಳಿಸಿದ್ದಾರೆ.

‘ದುರದೃಷ್ಟವಶಾತ್, ನಮ್ಮ ಲಸಿಕೆ ಭಾರತದಲ್ಲಿ ನೋಂದಣಿಯಾಗಿಲ್ಲ. ಆದರೆ, ಈ ಸಂಬಂಧ ಕಳೆದ ತಿಂಗಳೇ ನಾವು ಅರ್ಜಿ ಸಲ್ಲಿಸಿದ್ದೇವೆ. ಭಾರತದಲ್ಲೂ ಫೈಜರ್‌ ಲಸಿಕೆ ಲಭ್ಯವಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಲಸಿಕೆಗೆ ತ್ವರಿತ ಅನುಮೋದನೆ ನೀಡುವ ಮಾರ್ಗದ ಬಗ್ಗೆ ಭಾರತ ಸರ್ಕಾರದೊಂದಿಗೆ ಚರ್ಚೆ ನಡೆಸುತ್ತಿದ್ದೇವೆ’ ಎಂದು ಅವರು ಮಾಹಿತಿ ನೀಡಿದ್ದಾರೆ

‘ ಭಾರತಕ್ಕೆ ಫೈಜರ್‌ ಸಂಸ್ಥೆಯಿಂದ ₹519.4 ಕೋಟಿ (70 ಮಿಲಿಯನ್‌ ಡಾಲರ್‌) ಮೊತ್ತದ ಕೋವಿಡ್‌ ಔಷಧಿಗಳನ್ನು ದೇಣಿಗೆ ರೂಪದಲ್ಲಿ ನೀಡಲಾಗುವುದು’ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT