ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಲಭ್ಯ: ಬೃಹತ್‌ ಯೋಜನೆಗೆ ಪ್ರಧಾನಿ ಮೋದಿ ಚಾಲನೆ

Last Updated 25 ಅಕ್ಟೋಬರ್ 2021, 10:50 IST
ಅಕ್ಷರ ಗಾತ್ರ

ವಾರಾಣಸಿ (ಉತ್ತರ ಪ್ರದೇಶ): ದೇಶದಲ್ಲಿ ಬೃಹತ್ ಪ್ರಮಾಣದಲ್ಲಿ ಆರೋಗ್ಯ ಮೂಲ ಸೌಕರ್ಯ ಬಲಪಡಿಸುವ ಅತಿ ದೊಡ್ಡ ಯೋಜನೆಯಾಗಿರುವ ‘‍ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ ಆರೋಗ್ಯ ಮೂಲ ಸೌಕರ್ಯ ಮಿಷನ್‌‘ಗೆಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಇಲ್ಲಿ ಚಾಲನೆ ನೀಡಿದರು.

ಈಗಾಗಲೇ ಇರುವ ರಾಷ್ಟ್ರೀಯ ಆರೋಗ್ಯ ಮಿಷನ್‌ಗೆ ಹೆಚ್ಚುವರಿಯಾಗಿ ಈ ಯೋಜನೆ ಅನುಷ್ಠಾನಗೊಳ್ಳುತ್ತಿದೆ.

ನಗರ ಮತ್ತು ಗ್ರಾಮೀಣ ಭಾಗದಲ್ಲಿ ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ ಕ್ಷೇತ್ರದಲ್ಲಿ ಪ್ರಮುಖ ಆರೈಕೆ (ಕ್ರಿಟಿಕಲ್ ಕೇರ್‌) ಮತ್ತು ಪ್ರಾಥಮಿಕ ಆರೈಕೆ (ಪ್ರೈಮರಿ ಕೇರ್‌) ಸೌಲಭ್ಯಗಳ ನಡುವಿರುವ ವ್ಯತ್ಯಾಸವನ್ನು ಕಡಿಮೆಗೊಳಿಸಲು ಈ ಯೋಜನೆ ಸಹಕಾರಿಯಾಗಿದೆ. ಇದು 10 ಪ್ರಮುಖ ರಾಜ್ಯಗಳಲ್ಲಿ ಗುರುತಿಸಿರುವ 17,788 ಗ್ರಾಮೀಣ ಆರೋಗ್ಯ ಮತ್ತು ಕಲ್ಯಾಣ ಕೇಂದ್ರಗಳಿಗೆ ನೆರವು ನೀಡುತ್ತದೆ. ಉಳಿದಂತೆ ಎಲ್ಲ ರಾಜ್ಯಗಳಲ್ಲಿ 11,024 ನಗರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕೇಂದ್ರಗಳನ್ನು ಆರಂಭಿಸಲು ನೆರವು ನೀಡುತ್ತದೆ.

ಈ ಯೋಜನೆಯ ಮೂಲಕ 5 ಲಕ್ಷ ಜನಸಂಖ್ಯೆಗಿಂತ ಅಧಿಕ ಜನಸಂಖ್ಯೆ ಇರುವ ದೇಶದ ಎಲ್ಲಾ ಜಿಲ್ಲೆಗಳಲ್ಲಿನ ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಿಭಾಗಗಳ ಮೂಲಕ ಪ್ರಮುಖ ಆರೈಕೆ ಸೌಲಭ್ಯ ದೊರಕಲಿದೆ, ಉಳಿದ ಜಿಲ್ಲೆಗಳಲ್ಲಿ ರೆಫರಲ್‌ ಸೇವೆಗಳು ಲಭಿಸಲಿವೆ.

ದೇಶದೆಲ್ಲೆಡೆಗೆ ಜಾಲ ವಿಸ್ತರಿಸಿಕೊಂಡಿರುವ ಪ್ರಯೋಗಾಲಯಗಳ ಮೂಲಕ ರೋಗ ನಿರ್ಧರಣಾ ಸೇವೆ ಲಭಿಸಲಿದ್ದು, ಪ್ರತಿ ಜಿಲ್ಲೆಯಲ್ಲೂ ಸಮಗ್ರ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುತ್ತದೆ.

ಇದೇ ವೇಳೆ ಪ್ರಧಾನಿಯವರು ತಮ್ಮ ಸಂಸತ್ ಕ್ಷೇತ್ರದಲ್ಲಿ ₹5,200 ಕೋಟಿಗೂ ಅಧಿಕ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT