ಭಾನುವಾರ, ಜೂನ್ 13, 2021
20 °C

ರವೀಂದ್ರನಾಥ ಟ್ಯಾಗೋರ್‌, ಗೋಖಲೆ, ಮಹಾರಾಣಾ ಪ್ರತಾ‍‍ಪ್‌ಗೆ ಪ್ರಧಾನಿ ಗೌರವ ನಮನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ನೊಬೆಲ್ ಪುರಸ್ಕೃತ ರವೀಂದ್ರನಾಥ ಟ್ಯಾಗೋರ್ ಅವರ 160ನೇ ಜನ್ಮ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಗೌರವ ನಮನ ಸಲ್ಲಿಸಿದರು.

ಟ್ಯಾಗೋರ್‌ ಅವರು ಮೇ 7ರಂದು ಜನಿಸಿದರು. ಆದರೆ ಅವರ ಜನ್ಮಸ್ಥಳ ಪಶ್ಚಿಮ ಬಂಗಾಳದ ಸಾಂಪ್ರಾದಾಯಿಕ ಕ್ಯಾಲೆಂಡರ್‌ಗೆ ಅನುಗುಣವಾಗಿ ಅವರ ಜನ್ಮದಿನವನ್ನು ಈ ವರ್ಷ ಭಾನುವಾರ ಆಚರಿಸಲಾಗುತ್ತಿದೆ.

‘ಈ ಶುಭ ಸಂದರ್ಭದಲ್ಲಿ ನಾನು ರವೀಂದ್ರನಾಥ ಟ್ಯಾಗೋರ್‌ ಅವರಿಗೆ ತಲೆ ಬಾಗುತ್ತೇನೆ. ಟ್ಯಾಗೋರ್‌ ಅವರ ಆದರ್ಶಗಳು ನಮಗೆ ಅವರ ಕನಸಿನ ಭಾರತವನ್ನು ನಿರ್ಮಿಸಲು ಶಕ್ತಿ ಮತ್ತು ಸ್ಪೂರ್ತಿಯನ್ನು ನೀಡಲಿ’ ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ.

ಇದೇ ದಿನ ಜನಿಸಿದ ಸ್ವಾತಂತ್ರ್ಯ ಹೋರಾಟಗಾರ ಗೋ‍ಪಾಲ್‌ ಕೃಷ್ಣ ಗೋಖಲೆ ಮತ್ತು ರಾಜ ಮಹಾರಾಣಾ ‍ಪ್ರತಾಪ್‌ ಅವರಿಗೂ ಪ್ರಧಾನಿ ಮೋದಿ ಅವರು ಗೌರವ ಸಲ್ಲಿಸಿದರು.

ಈ ಬಗ್ಗೆ ಟ್ವೀಟ್‌ ಮಾಡಿರುವ ಪ್ರಧಾನಿ, ‘ಗೋಖಲೆ ಅವರು ತಮ್ಮ ಜೀವನವನ್ನು ದೇಶದ ಸೇವೆಗಾಗಿ ಸಮರ್ಪಿಸಿದರು. ಇದು ದೇಶದ ಜನತೆಗೆ ಸದಾ ಸ್ಪೂರ್ತಿ ನೀಡಲಿದೆ’ ಎಂದು ಹೇಳಿದ್ದಾರೆ.

‘ಮಹಾರಾಣಾ ಪ್ರತಾಪ್‌ ಅವರು ತಮ್ಮ ಮೌಲ್ಯ, ಧೈರ್ಯ ಮತ್ತು ಯುದ್ಧ ಕೌಶಲಗಳ ಮೂಲಕ ಭಾರತಕ್ಕೆ ಕೀರ್ತಿ ತಂದರು. ಮಾತೃಭೂಮಿಗಾಗಿ ಅವರ ಮಾಡಿದ ತ್ಯಾಗವು ಸದಾ ಸ್ಮರಣೀಯ’ ಎಂದು ಮೋದಿ ಹೇಳಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು