ಮೂರೇ ತಿಂಗಳಲ್ಲಿ ಕನ್ನಡ ಕಲಿತ ಕರ್ನಾಟಕದ ಕಲ್ಪನಾ ಸಾಧನೆಗೆ ಮೋದಿ ಮೆಚ್ಚುಗೆ

ನವದೆಹಲಿ: ಮೂರೇ ತಿಂಗಳಲ್ಲಿ ಕನ್ನಡ ಕಲಿತ ಕರ್ನಾಟಕದ ಕಲ್ಪನಾ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಕಾಶವಾಣಿಯಲ್ಲಿ ಪ್ರಸಾರವಾದ ತಿಂಗಳ ‘ಮನ್ ಕಿ ಬಾತ್’ನಲ್ಲಿ ಮಾತನಾಡುತ್ತಿರುವಾಗ ಅವರು ಭಾಷಾ ವೈವಿಧ್ಯದ ಬಗ್ಗೆ ವಿವರಿಸಿದ್ದಾರೆ. ಇದೇ ವೇಳೆ, 10ನೇ ತರಗತಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಉತ್ತಮ ಅಂಕ ಗಳಿಸಿದ ಕರ್ನಾಟಕದ ಕಲ್ಪನಾ ಎಂಬ ವಿದ್ಯಾರ್ಥಿನಿ ಬಗ್ಗೆ ಪ್ರಸ್ತಾಪಿಸಿದರು.
‘ಕಲ್ಪನಾಳ ವಿಶೇಷ ಎಂದರೆ, ಇತ್ತೀಚಿನವರೆಗೂ ಆಕೆಗೆ ಕನ್ನಡವೇ ಗೊತ್ತಿರಲಿಲ್ಲ. ಆದರೆ, ಮೂರೇ ತಿಂಗಳಲ್ಲಿ ಆಕೆ ಕನ್ನಡ ಕಲಿತಿದ್ದಲ್ಲದೇ, ಪರೀಕ್ಷೆಯಲ್ಲಿ 92 ಅಂಕ ಗಳಿಸಿ ಗಮನ ಸೆಳೆದಿದ್ದಾಳೆ’ ಎಂದು ಮೋದಿ ಶ್ಲಾಘಿಸಿದರು.
ಕೋವಿಡ್ ಪಿಡುಗಿನಲ್ಲೂ ಸ್ಟಾರ್ಟ್ಅಪ್ಗಳಿಂದ ಸಂಪತ್ತು ಸೃಷ್ಟಿ: ಪ್ರಧಾನಿ ಮೋದಿ
‘ಕೋವಿಡ್ ಪಿಡುಗಿನ ಸಂದರ್ಭದಲ್ಲಿ ಕೂಡ ದೇಶದ ಸ್ಟಾರ್ಟ್ಅಪ್ಗಳು ಸಂಪತ್ತು ಸೃಷ್ಟಿಸುವ ಜೊತೆಗೆ ತಮ್ಮ ಮೌಲ್ಯವನ್ನು ಸಹ ಹೆಚ್ಚಿಸಿಕೊಂಡಿವೆ’ ಎಂದೂ ಮೋದಿ ಹೇಳಿದರು.
Sharing this month's #MannKiBaat. Tune in. https://t.co/pa2tlSlVCD
— Narendra Modi (@narendramodi) May 29, 2022
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.