ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಕಟ್ಟುನಿಟ್ಟಿನ ಅನುಷ್ಠಾನ ಎಲ್ಲರ ಜವಾಬ್ದಾರಿ: ಮೋದಿ

Last Updated 7 ಸೆಪ್ಟೆಂಬರ್ 2020, 8:35 IST
ಅಕ್ಷರ ಗಾತ್ರ

ನವದೆಹಲಿ: ಅಧ್ಯಯನಕ್ಕಿಂತ ಹೆಚ್ಚಾಗಿ ಕಲಿಕೆಗೆ ಹೆಚ್ಚು ಒತ್ತು ನೀಡುವ ಮತ್ತು ವಿಮರ್ಶಾತ್ಮಕ ಚಿಂತನೆ ರೂಢಿಸುವಂತಹ ಪಠ್ಯಕ್ರಮವನ್ನು ರೂಪಿಸಿರುವಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕಟ್ಟುನಿಟ್ಟಾಗಿ ಮತ್ತು ಅಷ್ಟೇ ಉತ್ಸಾಹದಿಂದ ಅನುಷ್ಠಾನಗೊಳಿಸುವುದು ಎಲ್ಲ ಪಾಲುದಾರ ಸಂಸ್ಥೆಗಳ ಜವಾಬ್ದಾರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

‘ಉನ್ನತ ಶಿಕ್ಷಣವನ್ನು ಪರಿವರ್ತಿಸುವಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪಾತ್ರ ಕುರಿತ ರಾಜ್ಯಪಾಲರ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ನಮ್ಮ ಯುವ ಜನಾಂಗ ಇನ್ನು ಮುಂದೆ ತಮ್ಮ ಆಸಕ್ತಿಗೆ ಅನುಗುಣವಾಗಿ ಶಿಕ್ಷಣ ಕಲಿಯಲು ಸಾಧ್ಯವಾಗುತ್ತದೆ‘ ಎಂದು ಹೇಳಿದರು.

ಹಿಂದಿನ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳು ಅರಿವಿಲ್ಲದೇ ತಮ್ಮ ಬುದ್ಧಿ ಶಕ್ತಿಗೆ ಮೀರಿದ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳು ತ್ತಿದ್ದರು. ತಾವು ಆಯ್ಕೆ ಮಾಡಿಕೊಂಡಿರುವ ಕೋರ್ಸ್‌ ನಮ್ಮ ಶಕ್ತಿಗೆ ಮೀರಿದ್ದು ಎಂಬುದು ಬಹಳ ಸಮಯದ ನಂತರ ಅವರಿಗೆ ತಿಳಿಯುತ್ತಿತ್ತು. ಇಂಥ ಸಮಸ್ಯೆಗಳಿಗೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪರಿಹಾರ ನೀಡಲಾಗಿದೆ‘ ಎಂದು ಹೇಳಿದರು.

‘ಈ ಹೊಸ ಶಿಕ್ಷಣ ನೀತಿ ಚಿಕ್ಕ ವಯಸ್ಸಿನಲ್ಲೇ ವೃತ್ತಿಪರತೆಯೊಂದಿಗೆ ಜೀವನ ನಿರ್ವಹಣೆಗೆ ಸಿದ್ಧರಾಗುವಂತೆ ಯುವ ಸಮೂಹನ್ನು ರೂಪಿಸಲಿದೆ. ಮಾತ್ರವಲ್ಲ, ಪ್ರಾಯೋಗಿಕ ಕಲಿಕೆಯನ್ನು ಹೆಚ್ಚಿಸುವ ಮೂಲಕ ಜಾಗತಿಕ ಉದ್ಯೋಗ ಮಾರುಕಟ್ಟೆಯ ಸ್ಪರ್ಧೆಯಲ್ಲಿ ಭಾಗವಹಿಸಲು ನಮ್ಮ ಯುವ ಸಮೂಹವನ್ನು ಅಣಿಗೊಳಿಸುತ್ತದೆ‘ ಎಂದು ಪ್ರಧಾನಿ ತಿಳಿಸಿದರು.

‘ ಭಾರತವು ಕಲಿಕೆಯ ಪ್ರಾಚೀನ ಕೇಂದ್ರ. ಇದನ್ನು 21ನೇ ಶತಮಾನದಲ್ಲಿ ಜ್ಞಾನಾಧಾರಿತ ಆರ್ಥಿಕತೆಯ ಕೇಂದ್ರವಾಗಿ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ‘ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT