ಶುಕ್ರವಾರ, ಫೆಬ್ರವರಿ 26, 2021
32 °C

ಅಸ್ಸಾಂನಲ್ಲಿ 1 ಲಕ್ಷ ಮಂದಿಗೆ ಪಟ್ಟಾ ವಿತರಣೆಗೆ ಕ್ರಮ, 23ರಂದು ಚಾಲನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಗುವಾಹಟಿ: ಅಸ್ಸಾಂ ಸರ್ಕಾರವು 1 ಲಕ್ಷಕ್ಕೂ ಅಧಿಕ ಮಂದಿಗೆ ಭೂಮಿಯ ಪಟ್ಟಾ ನೀಡಲು ನಿರ್ಧರಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆಗೆ ಶನಿವಾರ ಚಾಲನೆ ನೀಡುವರು.

ಸ್ವಾತಂತ್ರ್ಯ ನಂತರ ಅಸ್ಸಾಂನಲ್ಲಿ ಏಕ ಕಾಲದಲ್ಲಿ ಇಷ್ಟೊಂದು ಮಂದಿಗೆ ಭೂಮಿಯ ಪಟ್ಟಾ ನೀಡುತ್ತಿರುವುದು ಇದೇ ಮೊದಲು.

‘ಸ್ಥಳೀಯರು ದಶಕಗಳಿಂದಲೂ ಅನಿಶ್ಚಿತ ಜೀವನ ನಡೆಸುತ್ತಿದ್ದರು. ಅಂತಹವರಿಗೆ ಭೂಮಿ ಮಂಜೂರು ಮಾಡಲಾಗುವುದು. ಇದೊಂದು ಜನಸ್ನೇಹಿ ಕಾರ್ಯಕ್ರಮ’ ಎಂದು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲಾ ತಿಳಿಸಿದ್ದಾರೆ.

‘ಅಕ್ರಮ ವಲಸಿಗರು ಸರ್ಕಾರಿ ಭೂಮಿ ಹಾಗೂ ಬುಡಕಟ್ಟು ಜನಾಂಗದವರಿಗೆ ಸೇರಿದ ಜಾಗ ಅತಿಕ್ರಮಿಸಿದ್ದಾರೆ. ಅಂತಹವರಿಂದ ಭೂಮಿ ವಶಕ್ಕೆ ಪಡೆದು ಅದನ್ನು ಬುಡಕಟ್ಟು ಜನರು, ಇತರೆ ಹಿಂದುಳಿದ ವರ್ಗದವರು (ಒಬಿಸಿ) ಮತ್ತು ಕಾಫಿ ತೋಟಗಳ ಕಾರ್ಮಿಕರಿಗೆ ನೀಡಲು ಸರ್ಕಾರವು ಮುಂದಾಗಿದೆ’ ಎಂದು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು