ಶುಕ್ರವಾರ, ಸೆಪ್ಟೆಂಬರ್ 25, 2020
22 °C

ದೇವರು ಅವರಿಗೆ ಒಳ್ಳೆಯದನ್ನೇ ಮಾಡಲಿ: ಪ್ರಣವ್ ಮುಖರ್ಜಿ ಪುತ್ರಿ ಟ್ವೀಟ್

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

Pranab Mukherjee

ನವದೆಹಲಿ: ‘ದೇವರು ತಂದೆಗೆ ಒಳಿತು ಮಾಡಲಿ. ಏನೇ ಆದರೂ ಎದುರಿಸಲು ನನಗೆ ಶಕ್ತಿಯನ್ನು ನೀಡಲಿ’ ಎಂದು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಹೇಳಿದ್ದಾರೆ. ಕಳೆದ ವರ್ಷ ಇದೇ ಸಮಯದಲ್ಲಿ ಪ್ರಣವ್ ಅವರು ‘ಭಾರತ ರತ್ನ’ ಸ್ವೀಕರಿಸಿದ ವಿಷಯವನ್ನು ನೆನಪಿಸಿ ಅವರು ಟ್ವೀಟ್ ಮಾಡಿದ್ದಾರೆ.

‘ಕಳೆದ ವರ್ಷ ಆಗಸ್ಟ್ 8 ನನ್ನ ಪಾಲಿಗೆ ಅತ್ಯಂತ ಸಂತೋಷದ ದಿನಗಳಲ್ಲಿ ಒಂದಾಗಿತ್ತು. ಆ ದಿನ ತಂದೆಯವರು ‘ಭಾರತ ರತ್ನ’ ಸ್ವೀಕರಿಸಿದ್ದರು. ಸರಿಯಾಗಿ ಒಂದು ವರ್ಷದ ನಂತರ ಆಗಸ್ಟ್ 10ರಂದು ಅವರು ತೀವ್ರವಾದ ಅನಾರೋಗ್ಯಕ್ಕೀಡಾಗಿದ್ದಾರೆ. ಅವರಿಗೆ ದೇವರೇ ಒಳಿತು ಮಾಡಬೇಕು ಹಾಗೂ ಸಂತಸ, ದುಃಖವನ್ನು ಸಮಾನವಾಗಿ ಸ್ವೀಕರಿಸಲು ನನಗೆ ಶಕ್ತಿ ನೀಡಬೇಕು’ ಎಂದು ಶರ್ಮಿಷ್ಠಾ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

84 ವರ್ಷದ ಪ್ರಣವ್ ಮುಖರ್ಜಿ ಅವರ ಮಿದುಳಿನಲ್ಲಿ ರಕ್ತಹೆಪ್ಪುಗಟ್ಟಿದ್ದ ಕಾರಣ ಅವರಿಗೆ ಸೋಮವಾರ ಸೇನೆಯ ರೀಸರ್ಚ್ ಆ್ಯಂಡ್‌ ರೆಫರಲ್‌ (ಆರ್‌ಆ್ಯಂಡ್‌ಆರ್) ಆಸ್ಪತ್ರೆಯಲ್ಲಿ ತುರ್ತು ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಶಸ್ತ್ರಚಿಕಿತ್ಸೆಗೂ ಮುನ್ನ, ಅವರಿಗೆ ಕೋವಿಡ್‌–19 ಇರುವುದು ದೃಢಪಟ್ಟಿತ್ತು.

ಇನ್ನಷ್ಟು...

ಪ್ರಣಬ್ ಮುಖರ್ಜಿಗೆ‌ ಮಿದುಳು ಶಸ್ತ್ರಚಿಕಿತ್ಸೆ; ಆರೋಗ್ಯ ಸ್ಥಿತಿ ಗಂಭೀರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು