ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಣವ್‌ ಜೀವನಚರಿತ್ರೆ: ಮಕ್ಕಳ ನಡುವೆ ಜಗಳ

Last Updated 15 ಡಿಸೆಂಬರ್ 2020, 12:58 IST
ಅಕ್ಷರ ಗಾತ್ರ

ನವದೆಹಲಿ: ಮಾಜಿ ರಾಷ್ಟ್ರಪತಿ, ದಿವಂಗತ ಪ್ರಣವ್‌ ಮುಖರ್ಜಿ ಅವರ ಆತ್ಮಕಥನದ ನಾಲ್ಕನೇ ಸಂಪುಟದ ಬಿಡುಗಡೆಯ ವಿಚಾರದಲ್ಲಿ ಅವರ ಮಕ್ಕಳ ನಡುವೆ ಜಗಳ ಶುರುವಾಗಿದೆ.

ವಿವಾದಿತ ಸಂಪುಟವನ್ನು ಮಾರುಕಟ್ಟೆಗೆ ಬಿಡುಗಡೆಮಾಡುವ ಮುನ್ನ ಪ್ರಕಾಶಕರು ಕಡ್ಡಾಯವಾಗಿ ತಮ್ಮ ಅನುಮತಿ ಪಡೆಯಬೇಕು ಎಂದು ಪ್ರಣವ್‌ ಅವರ ಪುತ್ರ ಅಭಿಜಿತ್‌ ಮುಖರ್ಜಿ ಹೇಳಿದ್ದಾರೆ. ಈ ವಿಚಾರದಲ್ಲಿ ಅನಗತ್ಯವಾಗಿ ಮೂಗು ತೂರಿಸಬಾರದು ಎಂದು ಶರ್ಮಿಷ್ಠ ಮುಖರ್ಜಿ ಅವರು ಸಹೋದರನಿಗೆ ಸಲಹೆ ನೀಡಿದ್ದಾರೆ.

ಪ್ರಣವ್‌ ಅವರ ಆತ್ಮಕಥನದ ನಾಲ್ಕನೇ ಸಂಪುಟ ‘ದಿ ಪ್ರೆಸಿಡೆನ್ಷಿಯಲ್‌ ಇಯರ್ಸ್‌: 2012–2017’ ಕೃತಿಯನ್ನು ಮುಂದಿನ ತಿಂಗಳು ಬಿಡುಗಡೆ ಮಾಡುವುದಾಗಿ ರೂಪಾ ಪಬ್ಲಿಕೇಷನ್ಸ್‌ ಹೋದ ವಾರ ಹೇಳಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರು ‘ನಿರಂಕುಶ ಶೈಲಿಯ ಕಾರ್ಯವೈಖರಿ’ಯನ್ನು ಪ್ರಯೋಗಿಸಿದರೆ, ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ ಯುಪಿಎಯನ್ನು ಉಳಿಸುವುದರಲ್ಲೇ ‘ತಲ್ಲೀನ’ರಾಗಿದ್ದುದು ಆಡಳಿತದ ಮೇಲೆ ಪ್ರತಿಕೂಲ ಪರಿಣಾಮ ಬೀರಿತು. ಲೋಕಸಭೆ ಚುನಾವಣೆಗೂ ಮುನ್ನ (2014) ರಾಜಕೀಯ ಗುರಿ ಕಳೆದುಕೊಂಡಿದ್ದ ಕಾಂಗ್ರೆಸ್‌ನ ವ್ಯವಹಾರಗಳನ್ನು ನಿಭಾಯಿಸಲು ಸೋನಿಯಾ ಗಾಂಧಿ ‘ಅಸಮರ್ಥ’ರಾಗಿದ್ದರು ಎಂದು ಪ್ರಣವ್‌ ಈ ಕೃತಿಯಲ್ಲಿ ಬರೆದಿದ್ದಾರೆ. ಇದು ಸಾಕಷ್ಟು ವಿವಾದಕ್ಕೂ ಎಡೆಮಾಡಿಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT