ಶನಿವಾರ, ಜುಲೈ 2, 2022
25 °C

₹ 3,500ಕ್ಕೆ ಆಮದು ಮಾಡಿಕೊಳ್ಳುವ 50 ಕೆ.ಜಿ ಯೂರಿಯಾ ರೈತರಿಗೆ ₹ 300ಕ್ಕೆ: ಮೋದಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಗಾಂಧಿನಗರ: ‘ಆಮದು ಮಾಡಿಕೊಳ್ಳುವ 50 ಕೆ.ಜಿ ಯೂರಿಯಾಕ್ಕೆ ₹ 3,500 ದರ ಇದೆ. ಅದನ್ನು ನಾವು ರೈತರಿಗೆ ₹ 300ಕ್ಕೆ ನೀಡುತ್ತಿದ್ದೇವೆ. ಅಂದರೆ ಉಳಿದ ₹ 3,200 ಅನ್ನು ಸರ್ಕಾರ ಭರಿಸುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

‘ಇಫ್ಕೊ’ ವತಿಯಿಂದ ಜಿಲ್ಲೆಯಲ್ಲಿ ಆರಂಭಿಸಲಾದ ನ್ಯಾನೊ ಯೂರಿಯಾ ಘಟಕವನ್ನು ಶನಿವಾರ ವರ್ಚುವಲ್‌ ರೂಪದಲ್ಲಿ ಉದ್ಘಾಟಿಸಿದ ಅವರು, ಕೋವಿಡ್‌ ಮತ್ತು ಉಕ್ರೇನ್‌ ಯುದ್ಧದ ಪರಿಣಾಮ ರಸಗೊಬ್ಬರ ಬೆಲೆ ಏರಿಕೆಯಾಗಿದೆ. ಆದರೆ ದೇಶದಲ್ಲಿ ರಸಗೊಬ್ಬರದ ಕೊರತೆ ಎದುರಾಗದಂತೆ ಸರ್ಕಾರ ನೋಡಿಕೊಳ್ಳುತ್ತಿದೆ ಎಂದರು.

ದೇಶದಲ್ಲಿ ಇನ್ನೂ ಎಂಟು ಕಡೆಗಳಲ್ಲಿ ನ್ಯಾನೊ ಯೂರಿಯಾ ಘಟಕಗಳನ್ನು ಸ್ಥಾಪಿಸಲಾಗುವುದು. ಇದರಿಂದ ವಿದೇಶಿಯೂರಿಯಾದ ಅವಲಂಬನೆ ತಪ್ಪಲಿದೆ ಎಂದರು.

ನ್ಯಾನೊ ತಂತ್ರಜ್ಞಾನ ಯೂರಿಯಾಕ್ಕೆ ಮಾತ್ರ ಸೀಮಿತವಲ್ಲ, ಇತರ ರಸಗೊಬ್ಬರಗಳಿಗೂ ಇದನ್ನು ಅಳವಡಿಸಲಾಗುವುದು. ಈ ಮೂಲಕ ರೈತರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು