ಸೋಮವಾರ, ಮಾರ್ಚ್ 27, 2023
28 °C

’ನೋಟು ಅಮಾನ್ಯೀಕರಣ’ ದುರಂತ: ಪ್ರಿಯಾಂಕಾ ವಾಗ್ದಾಳಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೇಂದ್ರ ಸರ್ಕಾರದ ’ನೋಟು ಅಮಾನ್ಯೀಕರಣ’ ಕ್ರಮವನ್ನು ’ದುರಂತ’ಕ್ಕೆ ಹೋಲಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಒಂದೊಮ್ಮೆ ಈ ಕ್ರಮ ಯಶಸ್ವಿಯಾಗಿದ್ದರೆ ದೇಶದಲ್ಲಿ ಭ್ರಷ್ಟಾಚಾರ ಏಕೆ ಕೊನೆಗೊಂಡಿಲ್ಲ ಮತ್ತು ಕಪ್ಪು ಹಣವನ್ನು ಏಕೆ ದೇಶಕ್ಕೆ ಮರಳಿ ತರಲಾಗಲಿಲ್ಲ’ ಎಂದು ಪ್ರಶ್ನಿಸಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ’ನೋಟು ಅಮಾನ್ಯೀಕರಣ’ ಕ್ರಮ ಕೈಗೊಂಡು ಐದು ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ’ಡಿಮಾನಿಟೈಸೇಷನ್‌ ಡಿಸಾಸ್ಟರ್‌’ ಹ್ಯಾಷ್‌ಟ್ಯಾಗ್‌ನೊಂದಿಗೆ ಹಿಂದಿಯಲ್ಲಿ ಟ್ವೀಟ್‌ ಮಾಡಿರುವ ಪ್ರಿಯಾಂಕಾ ಗಾಂಧಿ, ’ನೋಟು ರದ್ಧತಿಯಂತಹ ಕ್ರಮಗಳು ಯಶಸ್ವಿಯಾಗಿದ್ದರೆ, ದೇಶದಲ್ಲಿ ಭ್ರಷ್ಟಾಚಾರ ಏಕೆ ಕೊನೆಗೊಂಡಿಲ್ಲ? ಕಪ್ಪು ಹಣ ಏಕೆ ವಾಪಸ್ ಬಂದಿಲ್ಲ? ಹಣಕಾಸಿನ ವ್ಯವಹಾರಗಳು ಏಕೆ ನಗದು ರಹಿತವಾಗಿ ನಡೆಯುತ್ತಿಲ್ಲ? ಭಯೋತ್ಪಾದನೆ ಮೇಲೆ ಏಕೆ ಪರಿಣಾಮಬೀರಿಲ್ಲ ? ಬೆಲೆ ಏರಿಕೆ ನಿಯಂತ್ರಣಕ್ಕೆ ಬಂದಿಲ್ಲ?’ ಎಂದು ಪ್ರಶ್ನಿಸಿದ್ದಾರೆ.  

2016ರ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೂರದರ್ಶನದ ಮೂಲಕ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ₹ 500 ಮತ್ತು ₹1,000 ಮುಖಬೆಲೆಯ ಎಲ್ಲಾ ಕರೆನ್ಸಿ ನೋಟುಗಳನ್ನು ನಿಷೇಧಿಸುವ ನಿರ್ಧಾರವನ್ನು ಪ್ರಕಟಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು