ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಮಸೂದೆಗಳು ಈಸ್ಟ್ ಇಂಡಿಯಾ ಕಂಪನಿ ಆಡಳಿತ ನೆನಪಿಸುತ್ತವೆ: ಪ್ರಿಯಾಂಕಾ ಗಾಂಧಿ

Last Updated 25 ಸೆಪ್ಟೆಂಬರ್ 2020, 8:10 IST
ಅಕ್ಷರ ಗಾತ್ರ

ನವದೆಹಲಿ: ನರೇಂದ್ರ ಮೋದಿ ಸರ್ಕಾರದ ಕೃಷಿ ಮಸೂದೆಗಳು ಈಸ್ಟ್ ಇಂಡಿಯಾ ಕಂಪನಿ ಆಡಳಿತವನ್ನು ನೆನಪಿಸುವಂತಿವೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಟೀಕಿಸಿದ್ದಾರೆ.

ಹೊಸದಾಗಿ ಅನುಮೋದನೆ ಪಡೆಯಲಾಗಿರುವ ಮೂರು ಮಸೂದೆಗಳ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ರೈತರು ಕನಿಷ್ಠ ಬೆಂಬಲ ಬೆಲೆಯಿಂದ ವಂಚಿತರಾಗಲಿದ್ದಾರೆ’ ಎಂದು ಉಲ್ಲೇಖಿಸಿದ್ದಾರೆ.

‘ರೈತರು ತಮ್ಮದೇ ಕೃಷಿಭೂಮಿಗಳಲ್ಲಿ ಕಾರ್ಮಿಕರಾಗಲಿದ್ದಾರೆ. ಗುತ್ತಿಗೆ ಕೃಷಿ ಮೂಲಕ ಅವರನ್ನು ಗುಲಾಮರನ್ನಾಗಿಸಲು ಬಲವಂತಪಡಿಸಲಾಗುತ್ತದೆ. ಈ ರೀತಿ ಅನ್ಯಾಯ ಎಸಗಲು ನಾವು ಬಿಡುವುದಿಲ್ಲ’ ಎಂದು ಪ್ರಿಯಾಂಕಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT