ಪ್ರವಾದಿ ಮಹಮ್ಮದ್ ಅವಹೇಳನ ಪ್ರಕರಣ: ನೂಪುರ್ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ

ಕೋಲ್ಕತ್ತ: ಪ್ರವಾದಿ ಮಹಮ್ಮದ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗೆ, ನೂಪುರ್ ಶರ್ಮಾ ಹಾಜರಾಗದ ಕಾರಣ ಅವರಿಗೆ ಲುಕ್‌ಔಟ್ ನೋಟಿಸ್ ನೀಡಲಾಗಿದೆ ಎಂದು ಪಶ್ಚಿಮ ಬಂಗಾಳದ ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
‘ಅಮ್ಹೆರ್ಸ್ಟ್ ಸ್ಟ್ರೀಟ್ ಮತ್ತು ನರ್ಕಲ್‌ದಂಗ ಠಾಣೆಗಳ ಪೊಲೀಸರು ತಲಾ ಎರಡು ಬಾರಿ ನೂಪುರ್ ಅವರಿಗೆ ಸಮನ್ಸ್ ನೀಡಿದರೂ ಅವರು ವಿಚಾರಣೆಗೆ ಹಾಜರಾಗಿಲ್ಲ. ಆದ್ದರಿಂದ ಶನಿವಾರ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿದೆ’ ಎಂದು ಅಧಿಕಾರಿಗಳು ಹೇಳಿದರು.
ಕೋಲ್ಕತ್ತಗೆ ಭೇಟಿ ನೀಡಿದರೆ ತಮ್ಮ ಮೇಲೆ ಹಲ್ಲೆ ನಡೆಯಬಹುದು ಎಂಬ ಕಾರಣವನ್ನು ನೀಡಿ ಪೊಲೀಸ್ ಅಧಿಕಾರಿಗಳ ಮುಂದೆ ಹಾಜರಾಗಲು ನಾಲ್ಕು ವಾರಗಳ ಕಾಲಾವಕಾಶವನ್ನು ನೂಪುರ್ ಅವರು ಕೋರಿದ್ದರು.
ತೀಸ್ತಾ ಸೆಟಲ್ವಾಡ್ 14 ದಿನ ನ್ಯಾಯಾಂಗ ವಶಕ್ಕೆ: ಮತ್ತೆ ಕಸ್ಟಡಿಗೆ ಕೇಳದ ಪೊಲೀಸರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.