ಭಾನುವಾರ, ಅಕ್ಟೋಬರ್ 25, 2020
22 °C

ಮೋದಿ ಸರ್ಕಾರದಿಂದ ವಿಶೇಷ ಸ್ನೇಹಿತರ ಜೇಬು ತುಂಬಿಸುವ ಕೆಲಸ: ರಾಹುಲ್ ವ್ಯಂಗ್ಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ‘ವಿಶೇಷ ಸ್ನೇಹಿತರ ಜೇಬು ತುಂಬಿಸುವ ಕೆಲಸ’ವನ್ನಷ್ಟೇ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿ ಶನಿವಾರ ಟೀಕಿಸಿದ್ದಾರೆ.

‘ಜಾಗತಿಕ ಹಸಿವು ಸೂಚ್ಯಂಕ– 2020’ ವರದಿಯಲ್ಲಿ 107 ದೇಶಗಳ ಪೈಕಿ ಭಾರತದ ಸ್ಥಾನ 94ನೇಯದ್ದಾಗಿದೆ ಎಂಬ ವರದಿಯನ್ನು ಉಲ್ಲೇಖಿಸಿ ಅವರು ಈ ಮಾತು ಹೇಳಿದ್ದಾರೆ.

ಭಾರತದ ಸ್ಥಾನವು ಪಾಕಿಸ್ತಾನ (88), ನೇಪಾಳ (73) ಮತ್ತು ಬಾಂಗ್ಲಾದೇಶಕ್ಕಿಂತಲೂ (75) ಹಿಂದಿದೆ. ಮೋದಿ ಸರ್ಕಾರ ವಿಶೇಷ ಸ್ನೇಹಿತರ ಜೇಬು ತುಂಬಿಸಲು ಒತ್ತು ನೀಡುತ್ತಿರುವ ಕಾರಣ ಬಡವರು ಹಸಿವಿನಿಂದ ಬಳಲುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು