ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಂಘಟಿತ ವಲಯಕ್ಕೆ ಮರಣದಂಡನೆಯಾದ ಹಠಾತ್ ಲಾಕ್‌ಡೌನ್‌: ರಾಹುಲ್ ಗಾಂಧಿ

Last Updated 9 ಸೆಪ್ಟೆಂಬರ್ 2020, 7:19 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕದ ಕಾರಣ ದೇಶದಲ್ಲಿ ಜಾರಿಗೊಳಿಸಿದ ಹಠಾತ್ ಲಾಕ್‌ಡೌನ್ ಅಸಂಘಟಿತ ವಲಯದವರಿಗೆ ಮರಣದಂಡನೆಯಾಗಿ ಪರಿಣಮಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

‘21 ದಿನಗಳಲ್ಲಿ ಕೊರೊನಾವನ್ನು ಕೊನೆಗಾಣಿಸುವುದಾಗಿ ಭರವಸೆ ನೀಡಲಾಯಿತು. ಆದರೆ, ಈ ನಿರ್ಧಾರವು ಕೋಟ್ಯಂತರ ಉದ್ಯೋಗ, ಸಣ್ಣ ಉದ್ಯಮಗಳನ್ನು ಕೊನೆಗಾಣಿಸಿತು’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕೇಂದ್ರ ಸರ್ಕಾರವು ಜಾರಿಗೊಳಿಸಿದ್ದ ಲಾಕ್‌ಡೌನ್ ಜನವಿರೋಧಿ ಎಂದೂ ಅವರು ಟೀಕಿಸಿದ್ದಾರೆ.

ಕೇಂದ್ರದ ಎನ್‌ಡಿಎ ಸರ್ಕಾರವನ್ನು ಟೀಕಿಸಿ ಸರಣಿ ವಿಡಿಯೊ ಬಿಡುಗಡೆ ಮಾಡುತ್ತಿರುವ ಅವರು ನಾಲ್ಕನೇ ವಿಡಿಯೊವನ್ನು, ‘ಮೋದಿ ಸರ್ಕಾರ ಭಾರತದ ಆರ್ಥಿಕತೆಯನ್ನು ನಾಶ ಮಾಡಿದ್ದು ಹೇಗೆ’ ಎಂಬ ಶೀರ್ಷಿಕೆಯಡಿ ಬಿಡುಗಡೆ ಮಾಡಿದ್ದಾರೆ.

‘ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಬಡ ಜನರು ದಿನಗೂಲಿ ಅವಲಂಬಿತರಾಗಿದ್ದಾರೆ. ಇವರ ಮೇಲೆ ಸರ್ಕಾರವು ಕೊರೊನಾ ವೈರಸ್ ಲಾಕ್‌ಡೌನ್‌ನೊಂದಿಗೆ ಪ್ರಹಾರ ನಡೆಸಿತು’ ಎಂದು ರಾಹುಲ್ ಆರೋಪಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT