ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳದ ನೈಟ್‌ ಕ್ಲಬ್‌ನಲ್ಲಿ ಕಾಣಿಸಿಕೊಂಡ ರಾಹುಲ್‌ ಗಾಂಧಿ: ವಿಡಿಯೊ ವೈರಲ್

ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ಕಠ್ಮಂಡುವಿನ ನೈಟ್‌ ಕ್ಲಬ್‌ವೊಂದರಲ್ಲಿ ಕಾಣಿಸಿಕೊಂಡಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾಹುಲ್‌ ಗಾಂಧಿಪಾರ್ಟಿಯಲ್ಲಿ ಭಾಗವಹಿಸಿದ್ದು,ಅವರ ಸುತ್ತಮುತ್ತಲಿನ ಜನರು ಮದ್ಯ ಸೇವಿಸುವ ದೃಶ್ಯ ವಿಡಿಯೊದಲ್ಲಿಸೆರೆಯಾಗಿದೆ.

ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಪ್ರಯತ್ನ ವಿಫಲವಾಗಿದೆ.ಕಾಂಗ್ರೆಸ್ ನಾಯಕತ್ವ ಬಿಕ್ಕಟ್ಟಿನ ಚರ್ಚೆ ಮುನ್ನೆಲೆಗೆ ಬಂದಿರುವ ಬೆನ್ನಲ್ಲೇ ಈ ವಿಡಿಯೊ ವೈರಲ್‌ ಆಗಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸದ್ಯ ಕಠ್ಮಂಡುವಿನಲ್ಲಿರುವ ರಾಹುಲ್ ಗಾಂಧಿ ಸ್ನೇಹಿತರೊಬ್ಬರ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆಎಂದು ವರದಿಯಾಗಿದೆ.

ಕಠ್ಮಂಡು ಪೋಸ್ಟ್‌ನ ವರದಿ ಪ್ರಕಾರ, ರಾಹುಲ್ ಗಾಂಧಿ ಸೋಮವಾರ ಮಧ್ಯಾಹ್ನ ನೇಪಾಳದ ರಾಜಧಾನಿಗೆ ಬಂದಿಳಿದಿದ್ದಾರೆ. ಮ್ಯಾನ್ಮಾರ್‌ನ ಮಾಜಿ ನೇಪಾಳಿ ರಾಯಭಾರಿ ಭೀಮ್ ಉದಾಸ್ ಅವರು ತಮ್ಮ ಮಗಳ ಮದುವೆಯಲ್ಲಿ ಪಾಲ್ಗೊಳ್ಳಲು ರಾಹುಲ್ ಗಾಂಧಿಗೆ ಆಹ್ವಾನವನ್ನು ನೀಡಿದ್ದರು ಎಂದು ದಿನಪತ್ರಿಕೆವೊಂದು ಉಲ್ಲೇಖಿಸಿದೆ.

‘ಪಪ್ಪು ಜೀ (ರಾಹುಲ್ ಗಾಂಧಿ) ಪೂರ್ಣಾವಧಿಯ ಪ್ರವಾಸಿಯಾಗಿದ್ದು, ಅರೆಕಾಲಿಕ ರಾಜಕಾರಣಿಯಾಗಿದ್ದಾರೆ. ಅವರ ನಡೆ ಬೂಟಾಟಿಕೆಯಿಂದ ಕೂಡಿದೆ. ರಾಹುಲ್ ಗಾಂಧಿಯವರು ನಕಲಿ ಕಥೆಗಳು ಮತ್ತು ಟೀಕೆಗಳ ಮೂಲಕ ದೇಶದ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಟೀಕಿಸಿದ್ದಾರೆ.

ರಾಹುಲ್ ಗಾಂಧಿ ಹೇಳಿಕೆಗಳು ಅವರ ಸ್ವಂತ ಪಕ್ಷದ ಸದಸ್ಯರನ್ನೇ ದಾರಿ ತಪ್ಪಿಸುವಂತಿರುತ್ತವೆ ಎಂದು ನಖ್ವಿ ವಾಗ್ದಾಳಿ ನಡೆಸಿದ್ದಾರೆ.

ರಾಹುಲ್ ಗಾಂಧಿ ಇತ್ತೀಚೆಗೆ ಬೆಲೆ ಏರಿಕೆ, ವಿದ್ಯುತ್ ಬಿಕ್ಕಟ್ಟು, ನಿರುದ್ಯೋಗ, ಹಣದುಬ್ಬರ ಸೇರಿದಂತೆ ವಿವಿಧ ವಿಷಯಗಳನ್ನು ಪ್ರಸ್ತಾಪಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದರು.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT