ಭಾರತ್ ಜೋಡೊ ಯಾತ್ರೆ ಸಮಾರೋಪ ಸಮಾರಂಭ: ರಾಹುಲ್ ಗಾಂಧಿ ಧ್ವಜಾರೋಹಣ

ಶ್ರೀನಗರ: ಹಿಮಪಾತದ ನಡುವೆಯೂ ಇಲ್ಲಿನ ಪಂಥಚೌಕ್‌ನಲ್ಲಿ ರಾಷ್ಟ್ರಧ್ವಜ ಹಾರಿಸುವ ಮೂಲಕ ರಾಹುಲ್ ಗಾಂಧಿಯವರು ಭಾರತ್ ಜೋಡೊ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿದರು.
ಇದೇವೇಳೆ, ತಂಗಿ ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆ ಮಂಜುಗಡ್ಡೆಯ ಎರಚಾಟದ ಮೂಲಕ ರಾಹುಲ್ ಗಮನ ಸೆಳೆದಿದ್ದಾರೆ.
ಕನ್ಯಾಕುಮಾರಿಯಿಂದ ಸೆಪ್ಟೆಂಬರ್ 7,2022ರಂದು ಆರಂಭವಾಗಿದ್ದ ಯಾತ್ರೆಯ ಉದ್ದಕ್ಕೂ 136 ದಿನಗಳ ಕಾಲ ತೋರಿದ ಪ್ರೀತಿ, ವಿಶ್ವಾಸ ಮತ್ತು ಬೆಂಬಲಕ್ಕೆ ಧನ್ಯವಾದ ಎಂದು ಭಾರತ್ ಜೋಡೊ ಯಾತ್ರಿಗಳನ್ನು ಉದ್ದೇಶಿಸಿ ರಾಹುಲ್ ಗಾಂಧಿ ಹೇಳಿದ್ದಾರೆ.
ಬಳಿಕ, ಮೌಲಾನಾ ಆಜಾದ್ ರಸ್ತೆಯಲ್ಲಿರುವ ಪ್ರದೇಶ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೇರಿಕೊಂಡ ರಾಹುಲ್ ಮತ್ತು ಪ್ರಿಯಾಂಕಾ, ಮತ್ತೊಮ್ಮೆ ಧ್ವಜಾರೋಹಣ ಮಾಡಿದರು. ಬಳಿಕ, ರಾಷ್ಟ್ರಗೀತೆ ಹಾಡಲಾಯಿತು.
ಸಮಾರಂಭಕ್ಕಾಗಿ ಸ್ಥಳೀಯ ಆಡಳಿತ ಬಿಗಿ ಬಂದೋಬಸ್ತ್ ಮಾಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.