ಸೋಮವಾರ, ಜನವರಿ 17, 2022
19 °C

ನವೀಕೃತ ರೈಲು ನಿಲ್ದಾಣಗಳಲ್ಲಿ‘ನಿಲ್ದಾಣ ಅಭಿವೃದ್ಧಿ ಶುಲ್ಕ‘ ಜಾರಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ನವೀಕೃತ ರೈಲು ನಿಲ್ದಾಣಗಳಿಂದ ದೂರದ ಪ್ರಯಾಣ ಮಾಡುವ ಮತ್ತು ಈ ನಿಲ್ದಾಣಗಳಿಗೆ ಬರುವ ಪ್ರಯಾಣಿಕರಿಗೆ ಅನ್ವಯಿಸಿ ನಿಲ್ದಾಣ ಅಭಿವೃದ್ಧಿ ಶುಲ್ಕ ವಿಧಿಸಲು ರೈಲ್ವೆ ಇಲಾಖೆಯು ತೀರ್ಮಾನಿಸಿದೆ.

ಈ ಶುಲ್ಕವು ₹ 10 ರಿಂದ ₹ 50ರವರೆಗೂ ಇರಲಿದೆ. ಈ ಶುಲ್ಕದಿಂದ ಗ್ರಾಮೀಣ ಭಾಗದ ಪ್ರಯಾಣಿಕರಿಗೆ ವಿನಾಯಿತಿ ಇರಲಿದೆ. ನವೀಕೃತ ನಿಲ್ದಾಣ ಕಾರ್ಯಾರಂಭ ಮಾಡಿದ ನಂತರದಿಂದ ಇದು ಜಾರಿಗೆ ಬರಲಿದೆ.

ಬಳಕೆದಾರ ಶುಲ್ಕವು ಮೂರು ರೀತಿಯದ್ದಾಗಿರುತ್ತದೆ. ಎ.ಸಿ ದರ್ಜೆಗೆ ₹50, ಸ್ಲೀಪರ್ ದರ್ಜೆಗೆ ₹ 25 ಮತ್ತು ಕಾಯ್ದಿರಿಸದ ವರ್ಗಕ್ಕೆ ₹ 10 ಶುಲ್ಕ ವಿಧಿಸಲಾಗುತ್ತದೆ ಎಂದು ರೈಲ್ವೆ ಮಂಡಳಿಯ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಅಲ್ಲದೆ, ನವೀಕೃತ ನಿಲ್ದಾಣಗಳಿಗೆ ಅನ್ವಯಿಸಿ ಪ್ಲಾಟ್‌ಫಾರ್ಮ್‌ ಟಿಕೆಟ್ ದರ ₹10 ಏರಿಕೆಯಾಗಲಿದೆ ಎಂದು ತಿಳಿಸಿದೆ. ರೈಲ್ವೆ ಇಲಾಖೆ ವಿವಿಧ ನಿಲ್ದಾಣಗಳನ್ನು ನವೀಕರಿಸುತ್ತಿದ್ದು, ಆಧುನಿಕ ಸೌಲಭ್ಯ ಒದಗಿಸುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು