ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ರೋಜಗಾರ್ ಮೇಳದಲ್ಲಿ ರೈಲ್ವೆ ಇಲಾಖೆಯು ಹೊಸದಾಗಿ ನೇಮಕಗೊಂಡಿರುವ 50 ಸಾವಿರ ಮಂದಿಗೆ ನೇಮಕಾತಿ ಪತ್ರವನ್ನು ವಿತರಿಸಲು ಯೋಜಿಸಿದೆ.

ರೈಲ್ವೆಯು ದೇಶದಾದ್ಯಂತ 50 ಸ್ಥಳಗಳಲ್ಲಿ ರೋಜಗಾರ್ ಮೇಳ ಆಯೋಜಿಸಲಿದೆ. ಟ್ರ್ಯಾಕ್ ಮೆಂಟೇನರ್, ಹೆಲ್ಪರ್, ಪಾಯಿಂಟ್‌ಮನ್, ವೆಲ್ಡರ್ ಮತ್ತು ಕಮರ್ಷಿಯಲ್ ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿ ಪತ್ರಗಳನ್ನು ಲೆವೆಲ್ -1 ವರ್ಗ ಸೇರಿದಂತೆ ಗ್ರೂಪ್ ಸಿ ಹುದ್ದೆಗಳಿಗೆ ಆಯ್ಕೆಯಾದವರಿಗೆ ಹಸ್ತಾಂತರಿಸಲಾಗುವುದು ಎಂದು ರೈಲ್ವೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ರೈಲ್ವೆ ಉದ್ಯೋಗಕ್ಕೆ ಅರ್ಹತೆ ಪಡೆದವರಿಗೆ ಒಂದೇ ಸ್ಥಳದಲ್ಲಿ ನೇಮಕಾತಿ ಪತ್ರವನ್ನು ಹಸ್ತಾಂತರಿಸಲಿದ್ದು, ಉಳಿದ ಕೇಂದ್ರ ಸಚಿವರು ಮತ್ತು ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಪತ್ರಗಳನ್ನು ಹಸ್ತಾಂತರಿಸಲಿದ್ದಾರೆ.

ಪ್ರಸಕ್ತ ವರ್ಷದ ಫೆಬ್ರವರಿ ವೇಳೆಗೆ ರಾಷ್ಟ್ರೀಯ ಸಾರಿಗೆಯಲ್ಲಿ ಒಟ್ಟು 2,885 ಗೆಜೆಟೆಡ್ ಹುದ್ದೆಗಳು ಮತ್ತು 3,12,895 ನಾನ್ ಗೆಜೆಟೆಡ್ ಹುದ್ದೆಗಳು ಖಾಲಿ ಇವೆ. ಪ್ರಸ್ತುತ ಲೆವೆಲ್ -1 ರಲ್ಲಿ 1,03,769 ಖಾಲಿ ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಯುತ್ತಿದೆ, ಇದಕ್ಕಾಗಿ ನೇಮಕಾತಿ ಪತ್ರಗಳನ್ನು ನೀಡಲಾಗುತ್ತಿದೆ.

50,000 ನೇಮಕಾತಿ ಪತ್ರಗಳು ಕೆಲವೇ ದಿನಗಳಲ್ಲಿ ಸಿದ್ಧವಾಗುತ್ತವೆ. ರೋಜಗಾರ್ ಮೇಳದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಇದನ್ನು ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.