ಬುಧವಾರ, ಜುಲೈ 6, 2022
23 °C

ರಾಜಸ್ಥಾನ: ಸೇತುವೆ ಮೇಲಿಂದ ಚಂಬಲ್ ನದಿಗೆ ಬಿದ್ದ ಕಾರು, ಎಂಟು ಮಂದಿ ಸಾವು

ಪ್ರಜಾವಾಣಿ ವೆಬ್ ಡೆ‌ಸ್ಕ್ Updated:

ಅಕ್ಷರ ಗಾತ್ರ : | |

ಜೈಪುರ: ರಾಜಸ್ಥಾನದ ಕೋಟಾ ಜಿಲ್ಲೆ ವ್ಯಾಪ್ತಿಯ ಚಂಬಲ್ ನದಿಗೆ ಭಾನುವಾರ ಸೇತುವೆ ಮೇಲಿನಿಂದ ಕಾರು ಬಿದ್ದಿದ್ದು, ಎಂಟು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ಮೃತರು ಕೋಟಾದಿಂದ ಉಜ್ಜಯಿನಿಗೆ ಮದುವೆ ಸಮಾರಂಭಕ್ಕೆ ಹೋಗುತ್ತಿದ್ದರು ಎಂದು ವರದಿಯಾಗಿದೆ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. 

ಚಾಲಕನ ನಿಯಂತ್ರಣ ತಪ್ಪಿ ಕಾರು ಸೇತುವೆಯಿಂದ ನೇರವಾಗಿ ನದಿಗೆ ಬಿದ್ದಿದೆ. ಪರಿಣಾಮ ಕಾರಿನಲ್ಲಿದ್ದ ಎಲ್ಲಾ ಎಂಟು ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎಂದು ಕೋಟಾ ಎಸ್‌ಪಿ ಕೇಸರ್ ಸಿಂಗ್ ಶೇಖಾವತ್ ತಿಳಿಸಿದ್ದಾರೆ. 

ಕ್ರೇನ್ ಸಹಾಯದಿಂದ ಕಾರನ್ನು ನದಿಯಿಂದ ಹೊರತೆಗೆಯಲಾಗಿದೆ. ಮೃತದೇಹಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಹೇಳಿದ್ದಾರೆ. 

ಓದಿ...  ಸುಳ್ಳು ಮಾಹಿತಿ ನೀಡಿ ಬಾರ್‌ ಲೈಸನ್ಸ್‌ ಪಡೆದ ಸಮೀರ್ ವಾಂಖೆಡೆ: ಎಫ್‌ಐಆರ್ ದಾಖಲು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು