ಜೈಪುರ: ಮೊದಲ ಹಂತದಲ್ಲಿ 4.5 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್–19 ಲಸಿಕೆ ಹಾಕಲಾಗುವುದು ಎಂದು ಅಶೋಕ್ ಗೆಹ್ಲೋಟ್ ನೇತೃತ್ವದ ರಾಜಸ್ಥಾನ ಸರ್ಕಾರ ತಿಳಿಸಿದೆ.

‘ಜನವರಿ 16ರಿಂದ ಆರಂಭವಾಗಲಿರುವ ಮೊದಲ ಹಂತದ ಕೋವಿಡ್–19 ಲಸಿಕೆ ವಿತರಣೆ ಕಾರ್ಯಕ್ರಮದಲ್ಲಿ 4.5 ಲಕ್ಷ ಆರೋಗ್ಯ ಕಾರ್ಯಕರ್ತರನ್ನು ಸೇರಿಸಿಕೊಳ್ಳಲಾಗಿದ್ದು ಅವರಿಗೆ ಕೋವಿಶೀಲ್ಡ್ ಲಸಿಕೆ ಹಾಕಲಾಗುವುದು. 282 ಸ್ಥಳಗಳಲ್ಲಿ ಲಸಿಕೆ ಹಾಕಲು ಸರ್ಕಾರ ಪೂರ್ಣ ಸಿದ್ಧತೆ ನಡೆಸಿದೆ’ ಎಂದು ರಾಜಸ್ಥಾನ ಆರೋಗ್ಯ ಸಚಿವ ಡಾ. ರಘು ಶರ್ಮಾ ತಿಳಿಸಿದ್ದಾರೆ.

‘ವಾಯು ಯಾನ ಸಂಪರ್ಕ ಹೊಂದಿರುವ ಜೈಪುರ, ಉದಯಪುರ ಮತ್ತು ಜೋಧಪುರದಲ್ಲಿ ಲಸಿಕೆ ಸಂಗ್ರಹಿಸಿಕೊಳ್ಳಲಾಗುವುದು. ರಾಜ್ಯ ಮಟ್ಟದ ಮೂರು, ವಿಭಾಗ ಮಟ್ಟದ 7 ಹಾಗೂ ಜಿಲ್ಲಾ ಮಟ್ಟದ 34, ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ಒಟ್ಟು 2,444 ಲಸಿಕೆ ಸಂಗ್ರಹ ಕೇಂದ್ರಗಳು ಕಾರ್ಯಾಚರಿಸಲಿವೆ’ ಎಂದಿದ್ದಾರೆ.

‘ಒಟ್ಟು 5,626 ತಂಡಗಳಿಗೆ ತರಬೇತಿ ನೀಡಲಾಗಿದ್ದು, 3,689 ಸರ್ಕಾರಿ ವೈದ್ಯಕೀಯ ಸಂಸ್ಥೆಗಳು ಮತ್ತು ಖಾಸಗೀ ಕ್ಷೇತ್ರದ 2,969 ಖಾಸಗಿ ಆರೋಗ್ಯ ಸಂಸ್ಥೆಗಳನ್ನು ಮೊದಲ ಹಂತದ ಲಸಿಕೆ ಕಾರ್ಯಕ್ರಮಕ್ಕೆ ಗುರುತಿಸಲಾಗಿದೆ’ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.