ಗುರುವಾರ , ಜುಲೈ 7, 2022
25 °C

ಭದ್ರತೆಯ ಸವಾಲು ಎದುರಿಸಲು ಸಿದ್ಧರಿರುವಂತೆ ಸೇನೆಗೆ ರಾಜನಾಥ್‌ ಸಿಂಗ್‌ ಸಲಹೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ರಷ್ಯಾ-ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ, ಭಾರತ ಎದುರಿಸಬಹುದಾದ ಪ್ರತಿಯೊಂದು ಸಂಭಾವ್ಯ ಭದ್ರತಾ ಸವಾಲನ್ನು ಮೆಟ್ಟಿನಿಲ್ಲಲು ಸಿದ್ಧರಿರುವಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೇನಾಧಿಕಾರಿಗಳಿಗೆ ಗುರುವಾರ ಹೇಳಿದರು.

ಸೇನಾ ಕಮಾಂಡರ್‌ಗಳ ದ್ವೈವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ಯಾವುದೇ ಸಂಭವನೀಯ ಪರಿಸ್ಥಿತಿಯನ್ನು ಎದುರಿಸಲು ಮತ್ತು ಕಾರ್ಯಾಚರಣೆಗೆ ಸಿದ್ಧತೆ ಮಾಡಿಕೊಂಡಿರುವುದಕ್ಕೆ ರಕ್ಷಣಾ ಸಚಿವರು ಸೇನೆಯನ್ನು ಶ್ಲಾಘಿಸಿದರು.

ಸಮ್ಮೇಳನದಲ್ಲಿ ಚೀನಾ ಮತ್ತು ಪಾಕಿಸ್ತಾನದ ಗಡಿಯಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸವಾಲುಗಳ ಕುರಿತು ವ್ಯಾಪಕ ವಿಮರ್ಶೆ ನಡೆಯಿತು. ರಷ್ಯಾ-ಉಕ್ರೇನ್ ಯುದ್ಧದ ಸಂಭವನೀಯ ರಾಜಕೀಯ ಪರಿಣಾಮಗಳ ಬಗ್ಗೆಯೂ ಚರ್ಚೆ ನಡೆಯಿತು.

ದೇಶದ ಭದ್ರತೆಗಾಗಿ ಸೇನೆಯ ನಿಸ್ವಾರ್ಥ ಸೇವೆ ಮತ್ತು ಸ್ವದೇಶೀಕರಣದ ಮೂಲಕ ಆಧುನೀಕರಣದ ಕಡೆಗೆ ಅದರ ಅವಿರತ ಪ್ರಯತ್ನಗಳ ಬಗ್ಗೆ ರಕ್ಷಣಾ ಸಚಿವರು ಶ್ಲಾಘಿಸಿದ್ದಾರೆ ಎಂದು ಸೇನೆ ಹೇಳಿದೆ. ಈ ಸಮ್ಮೇಳನವು ಶುಕ್ರವಾರ ಮುಕ್ತಾಯಗೊಳ್ಳಲಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು