ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಎಚ್‌ಪಿ ಅಧ್ಯಕ್ಷರಾಗಿ ರವೀಂದ್ರ ನರೇನ್ ಸಿಂಗ್ ನೇಮಕ

Last Updated 17 ಜುಲೈ 2021, 18:56 IST
ಅಕ್ಷರ ಗಾತ್ರ

ನವದಹೆಲಿ: ವಿಶ್ವ ಹಿಂದೂ ಪರಿಷತ್‌ನ (ವಿಎಚ್‌ಪಿ) ನೂತನ ಅಧ್ಯಕ್ಷರಾಗಿ ಪದ್ಮಶ್ರೀ ಪುರಸ್ಕೃತ, ಖ್ಯಾತ ಮೂಳೆ ಶಸ್ತ್ರಚಿಕಿತ್ಸಾತಜ್ಞರಾದ ರವೀಂದ್ರ ನರೇನ್ ಸಿಂಗ್ ಅವರನ್ನು ಶನಿವಾರ ನೇಮಕ ಮಾಡಲಾಗಿದೆ.

‘ನಮ್ಮ ಟ್ರಸ್ಟಿಗಳ ಮಂಡಳಿ ಇಂದು ವಿಎಚ್‌ಪಿ ಅಧ್ಯಕ್ಷರಾಗಿ ಪದ್ಮಶ್ರೀ ರವೀಂದ್ರ ನರೇನ್ ಸಿಂಗ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದೆ’ ಎಂದು ವಿಎಚ್‌ಪಿ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘2018ರ ಏಪ್ರಿಲ್‌ನಿಂದ ವಿಎಚ್‌ಪಿ ಅಧ್ಯಕ್ಷರಾಗಿ ವಿಷ್ಣು ಸದಾಶಿವ್ ಕೊಕ್ಜೆ ಅವರು ಸೇವೆ ಸಲ್ಲಿಸುತ್ತಿದ್ದರು. ಕೊಕ್ಜೆ ಅವರಿಗೆ ಈಗ 83 ವರ್ಷ. ಅವರು ತಮ್ಮ ಜವಾಬ್ದಾರಿಗಳಿಂದ ಮುಕ್ತರಾಗಲು ಬಯಸಿದ್ದರು. ಅವರ ಇಚ್ಛೆಯಂತೆ ಮತ್ತು ನಮ್ಮ ಸಂವಿಧಾನದ ಪ್ರಕಾರ ಚುನಾವಣೆಯನ್ನು ನಡೆಸಿ ಹೊಸ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ’ ಎಂದು ಅವರು ವಿವರಿಸಿದರು.

ವಿಎಚ್‌ಪಿಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಸಂಘಟನೆಯ ಪ್ರಸ್ತುತ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಂಡೆ ಅವರನ್ನು ಸರ್ವಾನುಮತದಿಂದ ಮರು ಆಯ್ಕೆ ಮಾಡಲಾಯಿತು ಎಂದು ಜೈನ್ ಹೇಳಿದರು.

‘ಬಿಹಾರದವರಾದ ರವೀಂದ್ರ ನರೇನ್ ಸಿಂಗ್ ಅವರಿಗೆ ವೈದ್ಯಕೀಯ ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಯ ಕಾರಣಕ್ಕಾಗಿ 2010ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. ಖ್ಯಾತ ಮೂಳೆಶಸ್ತ್ರಚಿಕಿತ್ಸಾ ತಜ್ಞರಾಗಿರುವ ಅವರು, ಸಾಮಾಜಿ, ಧಾರ್ಮಿಕ, ವೈದ್ಯಕೀಯ ಸೇರಿದಂತೆ ಹಲವು ಕ್ಷೇತ್ರಗಳಿಗೆ ಕೊಡುಗೆ ನೀಡಿದ್ದಾರೆ’ ಎಂದು ಜೈನ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT