ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರದಲ್ಲಿ ಉಗ್ರಗಾಮಿಗಳ ನೇಮಕಾತಿ ಗಣನೀಯವಾಗಿ ಕಡಿಮೆಯಾಗಿದೆ: ಪೊಲೀಸ್ ಮುಖ್ಯಸ್ಥ

Last Updated 19 ಸೆಪ್ಟೆಂಬರ್ 2021, 2:35 IST
ಅಕ್ಷರ ಗಾತ್ರ

ಶ್ರೀನಗರ: 'ಯುವಕರು ಬುದ್ಧಿವಂತಿಕೆಯಿಂದ ವರ್ತಿಸುತ್ತಿರುವುದರಿಂದ ಕಣಿವೆಯಲ್ಲಿ ಉಗ್ರಗಾಮಿ ಗುಂಪುಗಳ ನೇಮಕಾತಿ ಗಣನೀಯವಾಗಿ ಕಡಿಮೆಯಾಗಿದೆ. ಕಾಶ್ಮೀರದಲ್ಲಿ ನಡೆಯುತ್ತಿರುವ ದಾಳಿಗಳು ಪಾಕಿಸ್ತಾನದ ಪರವಾದ ಪಡೆಗಳ ಹತಾಶೆಯನ್ನು ಪ್ರತಿಬಿಂಬಿಸುತ್ತವೆ. ಏಕೆಂದರೆ ವಿವಿಧ ಉಗ್ರ ಸಂಘಟನೆಗಳ ಉನ್ನತ ನಾಯಕತ್ವವು ಈಗ ನಾಶವಾಗಿದೆ' ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಶನಿವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಯುವಕರು ಬುದ್ಧಿವಂತಿಕೆಯಿಂದ ವರ್ತಿಸುತ್ತಿರುವುದರಿಂದಲೇ ಸ್ಥಳೀಯ ಮಟ್ಟದಲ್ಲಿ ಉಗ್ರಗಾಮಿಗಳ ನೇಮಕಾತಿ ಹೆಚ್ಚಿಲ್ಲ, ಬದಲಿಗೆ ಗಣನೀಯವಾಗಿ ಕಡಿಮೆಯಾಗಿದೆ. ಯುವಕರು ತಮ್ಮ ಜೀವನ ಮತ್ತು ವೃತ್ತಿಜೀವನದತ್ತ ಗಮನ ಹರಿಸಬೇಕು ಮತ್ತು ಯಾವುದೇ ಬೇಜವಾಬ್ದಾರಿಯುತ ಚಟುವಟಿಕೆಯಲ್ಲಿ ತೊಡಗಿಕೊಳ್ಳಬಾರದು' ಎಂದು ಸಿಂಗ್ ಮನವಿ ಮಾಡಿದ್ದಾರೆ.

ಈ ಪ್ರದೇಶದಲ್ಲಿ ಹಿಂಸಾಚಾರದಲ್ಲಿ ಇಳಿಕೆಯಾಗಿದೆ ಎಂದು ಭದ್ರತಾ ಪಡೆಗಳು ಹೇಳುತ್ತಿದ್ದರೂ ಕೂಡ ಕಾಶ್ಮೀರದಲ್ಲಿ ನಡೆಯುತ್ತಿರುವ ಉಗ್ರರ ದಾಳಿಯ ಬಗ್ಗೆ ಪ್ರಶ್ನಿಸಿದಾಗ, 'ಪೊಲೀಸರು ಮತ್ತು ಭದ್ರತಾ ಪಡೆಗಳು ಭಯೋತ್ಪಾದನೆ ವಿರುದ್ಧದ ಯಶಸ್ವಿ ಕಾರ್ಯಾಚರಣೆಯ ಫಲಿತಾಂಶಗಳು ಮತ್ತು ಅಂಕಿಅಂಶಗಳ ಆಧಾರದ ಮೇಲೆ ಮಾಹಿತಿಯನ್ನು ನೀಡುತ್ತವೆ. ಸದ್ಯ ಭಯೋತ್ಪಾದಕರ ಸಂಖ್ಯೆ ಕಡಿಮೆಯಾಗಿದೆ. ಭಯೋತ್ಪಾದಕರ ರಚನೆಯನ್ನೇ ನಾಶಪಡಿಸಲಾಗಿದೆ. ಅವರ ನಾಯಕತ್ವವನ್ನು ನಾಶಪಡಿಸಲಾಗಿದೆ' ಎಂದು ಹೇಳಿದರು.

'ಸದ್ಯ ನಡೆಯುತ್ತಿರುವ ಈ ದಾಳಿಗಳು ಪಾಕಿಸ್ತಾನದ ಪರವಾದ ಪಡೆಗಳ ಹತಾಶೆಯ ಪರಿಣಾಮವಾಗಿದೆ. ಅಂಥವರಿಗೆ ಕಠಿಣ ಶಿಕ್ಷೆಯನ್ನು ನೀಡುವುದಲ್ಲದೆ, ಮರಣಾನಂತರವೂ ಶಿಕ್ಷೆಯಾಗುತ್ತದೆ' ಎಂದು ಅವರು ಹೇಳಿದರು.

'ಜನರು ಶಾಂತಿಯುತ ವಾತಾವರಣದಲ್ಲಿ ಬದುಕಲು ಶಾಂತಿ ನೆಲೆಸಬೇಕೆಂದು ನಾವು ಬಯಸುತ್ತೇವೆ ಮತ್ತು ನಾವು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕಾಶ್ಮೀರದಲ್ಲಿ ಒಟ್ಟಾರೆ ಪರಿಸ್ಥಿತಿ ಶಾಂತಿಯುತವಾಗಿದೆ' ಎಂದರು.

'ಕಣಿವೆಯಲ್ಲಿನ ಭೂಗತ ಕೆಲಸಗಾರರ ಸಂಖ್ಯೆ (ಒಜಿಡಬ್ಲ್ಯು) ಹಿಂದಿನ ವರ್ಷಗಳಿಗೆ ಹೋಲಿಸಿದರೆ ಅರ್ಧದಷ್ಟು ಕಡಿಮೆಯಾಗಿದೆ ಮತ್ತು ಕುಪ್ವಾರಾ, ಬಾರಾಮುಲ್ಲಾ ಮತ್ತು ಸೊಪೋರ್‌ನಲ್ಲಿ ಯಾವುದೇ ಸ್ಥಳೀಯ ಉಗ್ರಗಾಮಿಗಳು ಸಕ್ರಿಯವಾಗಿಲ್ಲ. ಬಂಡಿಪೋರಾ ಜಿಲ್ಲೆಯ ಸೊಪೋರ್ ಮತ್ತು ಸಂಬಲ್ ಪ್ರದೇಶಗಳನ್ನು ಹೊರತುಪಡಿಸಿ, ಉತ್ತರ ಕಾಶ್ಮೀರದಲ್ಲಿ ಯಾವುದೇ ಉಗ್ರಗಾಮಿಗಳು ಸಕ್ರಿಯವಾಗಿಲ್ಲ' ಎಂದು ಡಿಜಿಪಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT