ಶುಕ್ರವಾರ, ಜೂನ್ 25, 2021
21 °C

ಸಿಬ್ಬಂದಿ ಹಾಜರಾತಿ ನಿರ್ವಹಣೆ: ಇಲಾಖೆ ಮುಖ್ಯಸ್ಥರಿಗೆ ಸೂಚನೆ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌ ಹಿನ್ನೆಲೆಯಲ್ಲಿ ಎಲ್ಲ ಸಿಬ್ಬಂದಿಯ ಹಾಜರಾತಿಯನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಬೇಕು ಎಂದು ಕೇಂದ್ರ ಸಿಬ್ಬಂದಿ ಸಚಿವಾಲಯವು ವಿವಿಧ ಇಲಾಖೆಗಳ ಕಾರ್ಯದರ್ಶಿಗಳಿಗೆ ಸೂಚಿಸಿದೆ.

ಗರ್ಭಿಣಿಯರು ಮತ್ತು ಅಂಗವಿಕಲ ಸಿಬ್ಬಂದಿಗೆ ಕಚೇರಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಬೇಕು. ಆದರೆ, ಅವರು ಮನೆಯಿಂದಲೇ ಕಾರ್ಯನಿರ್ವಹಿಸಬಹುದು ಎಂದು ತಿಳಿಸಿದ್ದಾರೆ.

ಸಚಿವಾಲಯಗಳು, ಎಲ್ಲ ಇಲಾಖೆಗಳ ಮುಖ್ಯಸ್ಥರು ತಮ್ಮ ಕೆಳಹಂತದ ಎಲ್ಲ ಸಿಬ್ಬಂದಿ ಹಾಜರಾತಿಯನ್ನು ನಿರ್ವಹಣೆ ಮಾಡಬೇಕು. ಕಚೇರಿಗಳಲ್ಲಿ ದಟ್ಟಣೆ ಆಗದಂತೆ ವಿಭಾಗದ ಮುಖ್ಯಸ್ಥರು ಸೂಚಿಸಿದ ಸಮಯದಲ್ಲಿ ಕಾರ್ಯನಿರ್ವಹಿಸಲು ಸಿಬ್ಬಂದಿ ಬದ್ದರಾಗಬೇಕು. ಕಂಟೇನ್‌ಮೆಂಟ್‌ ವಲಯದಲ್ಲಿ ಇರುವ ಕಚೇರಿಗಳ ಸಿಬ್ಬಂದಿ ಪರಿಸ್ಥಿತಿ ತಹಬದಿಗೆ ಬರುವವರೆಗೂ ಕಚೇರಿಗೂ ಬರುವುದಕ್ಕೆ ವಿನಾಯಿತಿ ಇದೆ ಎಂದು ತಿಳಿಸಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು