ಗುರುವಾರ , ಆಗಸ್ಟ್ 11, 2022
27 °C
ತನಿಖೆಗೆ ಬಿಜೆಪಿ, ಹಿಂದೂಪರ ಸಂಘಟನೆಗಳ ಅಗ್ರಹ

ಕೇರಳ: ಪೊಲೀಸ್ ವ್ಯಾನ್ ಮೇಲೆ ಧಾರ್ಮಿಕ ಚಿಹ್ನೆಯ ಸ್ಟಿಕ್ಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರ: ಕೇರಳದ ಪೊಲೀಸ್ ವ್ಯಾನ್‌ವೊಂದರ ಮೇಲೆ ಧಾರ್ಮಿಕ ಚಿಹ್ನೆಯ ಸ್ಟಿಕ್ಕರ್ ಹಚ್ಚಿರುವ ವಿಷಯವು ವಿವಾದಕ್ಕೀಡಾಗಿದ್ದು, ಅಲ್ಲಿನ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳನ್ನು ಕೆರಳಿಸಿದೆ. 

ಪೊಲೀಸ್ ವ್ಯಾನ್‌ವೊಂದರ ಮೇಲೆ ಸ್ಟಿಕ್ಕರ್ ಇರುವ ಚಿತ್ರವನ್ನು ಬಿಜೆಪಿ ಮತ್ತು ಹಿಂದೂ ಐಕ್ಯವೇದಿ ಮುಖಂಡರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು ತನಿಖೆಗೆ ಒತ್ತಾಯಿಸಿದ್ದಾರೆ. 

ಕೇರಳದ ಸಶಸ್ತ್ರ ಪೊಲೀಸ್ ಬೆಟಾಲಿಯನ್ ಬಳಸುತ್ತಿರುವ ಈ ವ್ಯಾನ್ ಅನ್ನು ಕಳೆದ ವಾರ ಶಬರಿಮಲೆ ಬಳಿಯ ಪಂಬಾದಲ್ಲಿ ನಿಲ್ಲಿಸಿದ್ದಾಗ ವ್ಯಕ್ತಿಯೊಬ್ಬರು ವ್ಯಾನಿನ ಚಿತ್ರವನ್ನು ತೆಗೆದಿದ್ದಾರೆ. ಸ್ಟಿಕ್ಕರ್ ಅನ್ನು ತೆಗೆದುಹಾಕಲಾಗಿದ್ದು, ಯಾವುದೇ ಪೊಲೀಸ್ ವಾಹನದ ಮೇಲೆ ಧಾರ್ಮಿಕ ಚಿಹ್ನೆಗಳನ್ನು ಬಳಸದಂತೆ ಇಲಾಖೆಯು ಖಾತ್ರಿ ಪಡಿಸಿದೆ. 

‍‘ಸ್ಟಿಕ್ಕರ್ ಪತ್ತೆಯಾದ ಪೊಲೀಸ್ ವ್ಯಾನಿನ ಚಾಲಕ ಅದನ್ನು ಪ್ರತಿಫಲಿತ ಸ್ಟಿಕ್ಕರ್ ಎಂದು ಭಾವಿಸಿ ಅಂಟಿಸಿದ್ದಾನೆ. ಇದರ  ಹಿಂದೆ ಯಾವುದೇ ದುರುದ್ದೇಶಪೂರಿತ ಉದ್ದೇಶವಿಲ್ಲ. ಅಗತ್ಯವಿದ್ದರೆ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಸಶಸ್ತ್ರ ಪೊಲೀಸ್ ಬೆಟಾಲಿಯನ್ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಎಡಿಜಿಪಿ) ಕೆ. ಪದ್ಮಕುಮಾರ್  ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು