ಶನಿವಾರ, ಮಾರ್ಚ್ 25, 2023
22 °C
ಕುಕ್ಕುಟೋದ್ಯಮ ಸಮೂಹಕ್ಕೆ ಸೇರಿದ 40 ಸ್ಥಳಗಳ ಮೇಲೆ ದಾಳಿ

ತಮಿಳುನಾಡು: ಲೆಕ್ಕಪತ್ರ ಇಲ್ಲದ ₹ 300 ಕೋಟಿ ಆದಾಯ ಪತ್ತೆ, ಐಟಿ ಇಲಾಖೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪಶು ಆಹಾರ ಉತ್ಪಾದನೆ ಹಾಗೂ ಮೊಟ್ಟೆ ಉತ್ಪನ್ನಗಳ ರಫ್ತು ವ್ಯವಹಾರ ನಡೆಸುತ್ತಿರುವ ತಮಿಳುನಾಡು ಮೂಲದ ಕುಕ್ಕುಟೋದ್ಯಮ ಸಮೂಹದ ಮೇಲೆ ಈಚೆಗೆ ನಡೆದ ದಾಳಿ ವೇಳೆ ಲೆಕ್ಕಪತ್ರ ಇಲ್ಲದ ₹ 300 ಕೋಟಿಗೂ ಅಧಿಕ ಆದಾಯ ಪತ್ತೆ ಮಾಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮಂಗಳವಾರ ಹೇಳಿದೆ.

ಲೆಕ್ಕಪತ್ರ ಇಲ್ಲದ ₹ 3.3 ಕೋಟಿ ನಗದನ್ನು ಸಹ ಜಪ್ತಿ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ.

ತಮಿಳುನಾಡು, ಕೇರಳ ಹಾಗೂ ಕರ್ನಾಟಕದಲ್ಲಿರುವ, ಸಮೂಹಕ್ಕೆ ಸೇರಿದ 40 ಸ್ಥಳಗಳಲ್ಲಿ ಅಕ್ಟೋಬರ್‌ 27ರಂದು ಶೋಧ ಕಾರ್ಯ ಕೈಗೊಳ್ಳಲಾಗಿತ್ತು. ಈ ಸಮೂಹವು ಖಾದ್ಯ ತೈಲವನ್ನು ಸಹ ಉತ್ಪಾದಿಸುತ್ತದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

‘ದಾಳಿ ವೇಳೆ ಹಲವು ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಅಧಿಕ ವೆಚ್ಚ ತೋರಿಸಿರುವುದು, ಖರೀದಿ–ಮಾರಾಟಕ್ಕೆ ಸಂಬಂಧಿಸಿ ನಕಲಿ ಲೆಕ್ಕಪತ್ರ ನಿರ್ವಹಣೆ, ಗುಜರಿ ವಸ್ತುಗಳು ಹಾಗೂ ಉಪ ಉತ್ಪನ್ನಗಳ ಮಾರಾಟ ಕುರಿತ ಮಾಹಿತಿಯನ್ನು ಈ ಉದ್ಯಮ ಸಮೂಹ ಮುಚ್ಚಿಟ್ಟಿರುವುದು ಈ ದಾಖಲೆಗಳ ಪರಿಶೀಲನೆ ವೇಳೆ ತಿಳಿದುಬಂತು’ ಎಂದು ಇಲಾಖೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು