ಬುಧವಾರ, ಸೆಪ್ಟೆಂಬರ್ 22, 2021
21 °C

ಶತಮಾನೋತ್ಸವದ ವೇಳೆಗೆ ಆರ್‌ಎಸ್ಎಸ್ ಪ್ರತಿ ಮನೆಗೂ ತಲುಪಿರಬೇಕು: ಮೋಹನ್ ಭಾಗವತ್

ಪಿಟಿಐ Updated:

ಅಕ್ಷರ ಗಾತ್ರ : | |

ಧನಬಾದ್ (ಜಾರ್ಖಂಡ್): ರಾಷ್ಟ್ರೀಯ ಸ್ವಯಂಸೇವಕ ಸಂಘವು ನಾಲ್ಕು ವರ್ಷಗಳ ಬಳಿಕ ತನ್ನ ಶತಮಾನೋತ್ಸವವನ್ನು ಆಚರಿಸುವ ವೇಳೆಗೆ ಸಂಘಟನೆಯ ಗುರಿಯು ಪ್ರತಿ ಮನೆಯನ್ನು ತಲುಪಿರಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ.

ಸಂಘಟನೆಯ ಬೆಳವಣಿಗೆ ಅವಲೋಕನಕ್ಕಾಗಿ ಮೂರು ದಿನಗಳ ಭೇಟಿ ಅಂಗವಾಗಿ ಶುಕ್ರವಾರ ಜಾರ್ಖಂಡ್‌ನ ಧನಬಾದ್ ತಲುಪಿದ ಆರ್‌ಎಸ್‌ಎಸ್ ಮುಖ್ಯಸ್ಥರು, ಜಾರ್ಖಂಡ್ ಮತ್ತು ಬಿಹಾರದ ಹಿರಿಯ ನಾಯಕರೊಂದಿಗೆ ಸಭೆ ನಡೆಸಿದರು.

'ಸಂಘಟನೆಯು 2025ಕ್ಕೆ 100 ವರ್ಷಗಳನ್ನು ಪೂರೈಸುವ ವೇಳೆಗೆ, ಎಲ್ಲಾ ಗ್ರಾಮಗಳಲ್ಲಿ ಶಾಖೆಗಳ ವಿಸ್ತರಣೆಯೊಂದಿಗೆ ಸ್ವಯಂ ಸೇವಕರು ಪ್ರತಿ ಮನೆಗೂ ತಲುಪಬೇಕು. ಹೀಗೆ ಮಾಡಲು ಎಲ್ಲರೂ ಶ್ರಮವಹಿಸಬೇಕು ಎಂದು ಸಲಹೆ ನೀಡಿದ ಅವರು, ಆರ್‌ಎಸ್‌ಎಸ್ ಸದಸ್ಯರಿಗೆ ಅವರ ನಡವಳಿಕೆ ಹೇಗಿರಬೇಕು ಮತ್ತು ರಾಷ್ಟ್ರ ನಿರ್ಮಾಣಕ್ಕಾಗಿ ಅವರ ಜೀವನವನ್ನು ಹೇಗೆ ಮೀಸಲಿಡಬೇಕು ಎಂದು ತಿಳಿಸಲಾಗಿದೆ ಎಂದರು.

ಆರ್‌ಎಸ್‌ಎಸ್ ಮುಖ್ಯಸ್ಥರು ಇಂದು (ಶನಿವಾರ) ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಇದಕ್ಕೂ ಮುನ್ನ ಭಾಗವತ್ ಅವರಿಗೆ ರಾಜ್ಯ ಬಿಜೆಪಿ ನಾಯಕರು ಮತ್ತು ಎಬಿವಿಪಿ ಮತ್ತು ಭಾರತೀಯ ಮಜ್ದೂರ್ ಸಂಘದ ಕಾರ್ಯಕರ್ತರು ಭವ್ಯವಾದ ಸ್ವಾಗತವನ್ನು ನೀಡಿದರು. ಅವರು ಬೆಳಿಗ್ಗೆ ಗಂಗಾ-ದಾಮೋದರ್ ಎಕ್ಸ್‌ಪ್ರೆಸ್‌ನಲ್ಲಿ ಪಾಟ್ನಾದಿಂದ ಧನಬಾದ್ ತಲುಪಿದರು.

ಶನಿವಾರ ಮತ್ತು ಭಾನುವಾರ ಅವರು ರಾಜ್ಯದ ಆರ್‌ಎಸ್‌ಎಸ್‌ನ ವಿವಿಧ ಶಾಖೆಗಳ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ. ಇದೇ ವೇಳೆಯಲ್ಲಿ, ಅವರು ವಿವಿಧ ಕ್ಷೇತ್ರಗಳ 100 ಪ್ರಖ್ಯಾತರನ್ನು ಭೇಟಿ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು