ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬರಿಮಲೆ: ದೇವರ ದರ್ಶನಕ್ಕೆ ಹೆಚ್ಚಿನ ಭಕ್ತಾದಿಗಳಿಗೆ ಅವಕಾಶ

Last Updated 2 ಡಿಸೆಂಬರ್ 2020, 9:21 IST
ಅಕ್ಷರ ಗಾತ್ರ

ಶಬರಿಮಲೆ(ಕೇರಳ): ಇಲ್ಲಿನ ಪ್ರಸಿದ್ಧ ಅಯ್ಯಪ್ಪ ದೇವಸ್ಥಾನದ ದ್ವಾರಗಳನ್ನು ವಾರ್ಷಿಕ ಮಂಡಲ-ಮಕರವಿಲಕ್ಕು ತೀರ್ಥಯಾತ್ರೆಗಾಗಿ ತೆರೆಯಲಾಗಿದ್ದು, ಕೋವಿಡ್‌ ಮಾರ್ಗಸೂಚಿಗಳಡಿ ದೇವರ ದರ್ಶನಕ್ಕೆ ಹೆಚ್ಚಿನ ಭಕ್ತಾದಿಗಳಿಗೆ ಅವಕಾಶ ನೀಡಲು ಕೇರಳ ಸರ್ಕಾರ ನಿರ್ಧರಿಸಿದೆ.

‘ಶನಿವಾರ ಮತ್ತು ಭಾನುವಾರ 3000 ಭಕ್ತರು ಮತ್ತು ಇನ್ನುಳಿದ ದಿನಗಳಲ್ಲಿ 2000 ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲು ಕೇರಳ ಸರ್ಕಾರ ನಿರ್ಧರಿಸಿದೆ. ಈ ಹಿಂದೆ ಪ್ರತಿನಿತ್ಯ 1000–2000 ಭಕ್ತರಿಗೆ ಮಾತ್ರ ಅನುವು ಮಾಡಿಕೊಡವುದಾಗಿ ನಿರ್ಧರಿಸಲಾಗಿತ್ತು’ ಎಂದು ಕೇರಳದ ಮುಜರಾಯಿ ಸಚಿವ ಕಡಕಂಪಳ್ಳಿ ಸುರೇಂದ್ರನ್‌ ಅವರು ತಿಳಿಸಿದರು.

‘ಎಲ್ಲಾ ಬುಕ್ಕಿಂಗ್‌ಗಳು ಆನ್‌ಲೈನ್‌ ಮೂಲಕ ನಡೆಯಲಿವೆ. ಯಾತ್ರಾತ್ರಿಗಳು ಬುಧವಾರದಿಂದ ಸಂಬಂಧ ಪಟ್ಟ ವೆಬ್‌ಸೈಟ್‌ಗಳ ಮೂಲಕ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಅನ್ನು ಕೂಡ ಮಾಡಬಹುದು. ಕೋವಿಡ್‌ ಮಾರ್ಗಸೂಚಿಗಳ ಅನುಸಾರ ಸಂಪೂರ್ಣ ತೀರ್ಥಯಾತ್ರೆಯನ್ನು ನಡೆಸಲಾಗುವುದು’ ಎಂದು ಅವರು ಮಾಹಿತಿ ನೀಡಿದರು.

ಪ್ರತಿ ಭಕ್ತರು ಶಬರಿಮಲೆ ಯಾತ್ರೆಗೆ ಬರುವ 24 ಗಂಟೆಗಳಿಗೆ ಮುನ್ನ ಕೋವಿಡ್ ಪರೀಕ್ಷೆ ಮಾಡಿಸಿರಬೇಕು. ನೆಗೆಟಿವ್ ಪ್ರಮಾಣ ಪತ್ರ ಪಡೆದಿದ್ದವರು ಮಾತ್ರ ದೇವಸ್ಥಾನ ಪ್ರವೇಶಿಸಬಹುದು. ಕೋವಿಡ್ ಪರೀಕ್ಷೆಗಾಗಿ ನೀಲಕ್ಕಲ್‌ ಶಿಬಿರಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗುತ್ತದೆ. ಇಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು, ವರದಿ ನೆಗೆಟಿವ್ ಬಂದರೆ ದೇವಸ್ಥಾನಕ್ಕೆ ತೆರಳಬಹುದು‘ ಎಂದು ಸಚಿವರು ತಿಳಿಸಿದರು.

ಕೇರಳ ಸರ್ಕಾರವು ಹೆಚ್ಚಿನ ಭಕ್ತಾದಿಗಳಿಗೆ ಅವಕಾಶ ಕಲ್ಪಿಸಿಕೊಟ್ಟಿರುವ ಹಿನ್ನೆಲೆಯಲ್ಲಿರಾಜ್ಯ ಆರೋಗ್ಯ ಇಲಾಖೆಯು ಶಿಬರಿಮಲೆಯ ಎಲ್ಲಾ ಶಿಬಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆ್ಯಂಟಿಜೆನ್‌ ಪರೀಕ್ಷೆಗಳನ್ನು ನಡೆಸುತ್ತಿದೆ.

ಇಲಾಖೆಯು ದೇವಾಲಯ ಮತ್ತು ಮೂಲ ಶಿಬಿರ ಪಂಬಾದಲ್ಲಿ 14 ದಿನಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸುತ್ತಿರುವ ಎಲ್ಲಾ ವರ್ಗದ ನೌಕರರು ಮತ್ತು ಸ್ವಯಂಸೇವಕರಿಗೆ ಸೋಮವಾರದಿಂದ ಪರೀಕ್ಷೆಯನ್ನು ಪ್ರಾರಂಭಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಈವರೆಗೆ ಪಂಬಾ ಆರೋಗ್ಯ ಕೇಂದ್ರದಲ್ಲಿ 200ಕ್ಕೂ ಹೆಚ್ಚು ಜನರನ್ನು ಪರೀಕ್ಷೆಸಲಾಗಿದೆ. ಇದರಲ್ಲಿ 4 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಅವರನ್ನು ಎರುಮಲ್ಲಿಯ ಕೋವಿಡ್‌ ಚಿಕಿತ್ಸೆ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT