ಬುಧವಾರ, ಆಗಸ್ಟ್ 4, 2021
20 °C

ವಿಶ್ವ ಭೂಪಟ: ಚರ್ಚೆಗೆ ಗ್ರಾಸವಾದ ಮಹಾಭಾರತದ ಮೊಲ ಮತ್ತು ಆಲದಮರದ ಎಲೆಗಳ ಕಥೆ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Twitter/Subramanian Swamy

ಬೆಂಗಳೂರು: ವಿಶ್ವ ಭೂಪಟವು ಮಹಾಭಾರತದ ಕಾಲದಲ್ಲೇ ಕಂಡುಹಿಡಿಯಲಾಗಿತ್ತು ಎಂಬ ಚರ್ಚೆ ಸಾಮಾಜಿಕ ತಾಣಗಳಲ್ಲಿ ಆರಂಭಗೊಂಡಿದೆ. ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಅವರು ಗುರುವಾರ ಮಾಡಿರುವ ಟ್ವೀಟ್‌ ಇದಕ್ಕೆ ಕಾರಣವಾಗಿದೆ.

ಮಹಾಭಾರತದ ಕಥೆಯಲ್ಲಿ ಧೃತರಾಷ್ಟ್ರನು ಬಾಹ್ಯಾಕಾಶದಲ್ಲಿ ವಿಶ್ವವು ಹೇಗೆ ಕಾಣುತ್ತದೆ? ಎಂದು ಸಂಜಯನನ್ನು ಪ್ರಶ್ನಿಸಿದ್ದನು. ಜೋಡಿಸಿದ ಎರಡು ಆಲದ ಮರಗಳ ಎಲೆಗಳು ಮತ್ತು ಅದರತ್ತ ಮುಖ ಮಾಡಿದ ಒಂದು ಮೊಲದಂತೆ ಕಾಣಿಸುತ್ತದೆ ಎಂದು ಸಂಜಯ ಹೇಳಿದ್ದಾಗಿ ಇರುವ ಪೋಸ್ಟ್‌ ಒಂದನ್ನು ಸುಬ್ರಮಣಿಯನ್‌ ಸ್ವಾಮಿ ಟ್ವೀಟ್‌ ಮಾಡಿದ್ದಾರೆ.

ಮೊಲ ಮತ್ತು ಆಲದ ಮರದ ಎಲೆಗಳ ಚಿತ್ರದ ಮೂಲಕ ವಿಶ್ವ ಭೂಪಟ ರಚಿಸಿದ್ದು ಸಂತ ರಾಮಾನುಜಾಚಾರ್ಯ. ಇದನ್ನು ನೋಡಿ ಎಲ್ಲರೂ ಹಾಸ್ಯ ಮಾಡಿದ್ದರು. ಈ ಚಿತ್ರವನ್ನು ಉಲ್ಟಾ ಮಾಡಿ ನೋಡಿ ಎಂಬ ಮಾಹಿತಿಯು ಪೋಸ್ಟ್‌ನಲ್ಲಿದೆ.

ರಾಮಾನುಜಾಚಾರ್ಯರು ಬಿಡಿಸಿದ್ದರು ಎನ್ನಲಾದ ಮೊಲ ಮತ್ತು ಆಲದ ಮರದ ಎಲೆಗಳನ್ನು ಹೋಲುವ ಚಿತ್ರವನ್ನು ಉಲ್ಟಾ ಮಾಡಿ ನೋಡಿದರೆ ಆಧುನಿಕ ಭೂಪಟವನ್ನು ಸುಮಾರಾಗಿ ಹೋಲಿಕೆಯಾಗುತ್ತದೆ. ಇದರ ಪ್ರಯೋಗ ಮಾಡಿದ ನೆಟ್ಟಿಗರು ಹೌದಲ್ಲವೇ ಎಂದು ಅಚ್ಚರಿಗೊಳ್ಳುತ್ತಿದ್ದಾರೆ.

ಇದು ನಿಜವೇ? ಎಂದು ನೆಟ್ಟಿಗರ ಪ್ರಶ್ನೆಗೆ ಎಲ್ಲವನ್ನು ಪರೀಕ್ಷಿಸಿ, ಸತ್ಯಶೋಧನೆ ನಡೆಸಿ ನೈಜತೆಯನ್ನು ತಿಳಿಯಬೇಕು. ಸಾಮಾನ್ಯ ಮತ್ತು ಅಸಾಮಾನ್ಯ ಸತ್ಯಗಳು ಅಡಗಿರುತ್ತವೆ ಎಂದು ಸುಬ್ರಮಣಿಯನ್‌ ಸ್ವಾಮಿ ಹೇಳಿದ್ದಾರೆ. ಭೂಪಟ ರಚನೆಯನ್ನು ಮಹಾಭಾರತದ ಕಥೆಗೆ ಎಳೆಯುವ ವ್ಯರ್ಥ ಪ್ರಯತ್ನವಿದು ಎಂದು ಕೆಲವರು ಟೀಕಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು