ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜು. 31ರೊಳಗೆ ಮೌಲ್ಯಮಾಪನ ಫಲಿತಾಂಶ ಪ್ರಕಟಿಸಿ:ಶಿಕ್ಷಣ ಮಂಡಳಿಗಳಿಗೆ ಸುಪ್ರೀಂ ಸೂಚನೆ

Last Updated 24 ಜೂನ್ 2021, 10:00 IST
ಅಕ್ಷರ ಗಾತ್ರ

ನವದೆಹಲಿ: ಇಂದಿನಿಂದ 10 ದಿನಗಳಲ್ಲಿ ಮೌಲ್ಯಮಾಪನದ ಯೋಜನೆಯನ್ನು ರೂಪಿಸಿ ತಿಳಿಸಬೇಕು ಮತ್ತು ಆಂತರಿಕ ಮೌಲ್ಯಮಾಪನ ಫಲಿತಾಂಶಗಳನ್ನು ಜುಲೈ 31 ರೊಳಗೆ ಘೋಷಿಸಬೇಕು ಎಂದು ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯಗಳ ಶಿಕ್ಷಣ ಮಂಡಳಿಗಳಿಗೆ ನಿರ್ದೇಶಿಸಿದೆ.

ಎಲ್ಲ ರಾಜ್ಯಗಳಲ್ಲಿ ಒಂದೇ ರೀತಿಯ ಮೌಲ್ಯಮಾಪನ ಯೋಜನೆ ಇರಬೇಕೆಂದು ಯಾವುದೇ ಆದೇಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಸುಪ್ರೀಂ ಕೋರ್ಟ್, ಪ್ರತಿ ಮಂಡಳಿಯು ಸ್ವಾಯತ್ತ ಮತ್ತು ವಿದ್ಯಾರ್ಥಿಗಳಿಗೆ ತನ್ನದೇ ಆದ ಮೌಲ್ಯಮಾಪನ ವಿಧಾನವನ್ನು ರೂಪಿಸಲು ಮುಕ್ತವಾಗಿದೆ ಎಂದು ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ದಿನೇಶ್ ಮಹೇಶ್ವರಿ ಅವರಿದ್ದ ವಿಭಾಗೀಯ ನ್ಯಾಯಪೀಠವು ಪ್ರತಿ ಮಂಡಳಿಯು ತಮ್ಮದೇ ಆದ ಯೋಜನೆಯನ್ನು ರೂಪಿಸಿಕೊಳ್ಳಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.

‘ಈ ಯೋಜನೆಯನ್ನು10 ದಿನಗಳ ಒಳಗೆ ಶೀಘ್ರವಾಗಿ ರೂಪಿಸಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಮಂಡಳಿಗಳಿಗೆ ನಿರ್ದೇಶಿಸುತ್ತೇವೆ ಮತ್ತು ಸಿಬಿಎಸ್ಇ ಹಾಗೂ ಸಿಐಎಸ್‌ಇಗೆ ನಿಗಪಡಿಸಿರುವ ಸಮಯದಂತೆ ಜುಲೈ 31, 2021 ರೊಳಗೆ ಆಂತರಿಕ ಮೌಲ್ಯಮಾಪನ ಫಲಿತಾಂಶಗಳನ್ನು ಘೋಷಿಸಬೇಕು’ಎಂದು ನ್ಯಾಯಪೀಠ ಹೇಳಿದೆ.

ಕೋವಿಡ್ -19 ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಬೋರ್ಡ್ ಪರೀಕ್ಷೆಗಳನ್ನು ನಡೆಸದಂತೆ ರಾಜ್ಯಗಳಿಗೆ ನಿರ್ದೇಶನ ಕೋರಿರುವ ಮನವಿಗಳ ಕುರಿತಂತೆ ವಿಚಾರಣೆ ನಡೆಸಿದ ಉನ್ನತ ನ್ಯಾಯಾಲಯ ಈ ಆದೇಶ ನೀಡಿದೆ.

‘ಪ್ರತಿ ಮಂಡಳಿಯು ತಮ್ಮದೇ ಆದ ಯೋಜನೆಯನ್ನು ರೂಪಿಸಬಹುದು ಎಂದು ನಾವು ಸ್ಪಷ್ಟಪಡಿಸುತ್ತೇವೆ. ಆದರೂ, ಸಂಬಂಧಪಟ್ಟ ಮಂಡಳಿಯು ರೂಪಿಸುವ ಯೋಜನೆಯ ನಿಖರತೆ ಮತ್ತು ಸಿಂಧುತ್ವವನ್ನು ನಾವು ಅನುಮೋದಿಸುತ್ತಿಲ್ಲ ಎಂದು ನಾವು ಮತ್ತಷ್ಟು ಸ್ಪಷ್ಟಪಡಿಸುತ್ತೇವೆ ..’ಎಂದು ನ್ಯಾಯಪೀಠ ಹೇಳಿದೆ.

ವಿಡಿಯೋ-ಕಾನ್ಫರೆನ್ಸಿಂಗ್ ಮೂಲಕ ನಡೆಸಿದ ವಿಚಾರಣೆಯ ಸಮಯದಲ್ಲಿ, ಸಾಂಕ್ರಾಮಿಕ ರೋಗದ ಮಧ್ಯೆ 12 ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಿದ ರಾಜ್ಯ ಮಂಡಳಿಗಳು ವಿದ್ಯಾರ್ಥಿಗಳನ್ನು ಮೌಲ್ಯಮಾಪನ ಮಾಡಲು ಏಕರೂಪದ ಯೋಜನೆಯನ್ನು ಹೊಂದಲು ಕೇಳಿಕೊಳ್ಳಬಹುದು ಎಂದು ನ್ಯಾಯಪೀಠಕ್ಕೆ ಹಾಜರಾದ ವಕೀಲರು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಅದು ಸ್ವೀಕಾರಾರ್ಹವಲ್ಲ. ಏಕೆಂದರೆ, ಪ್ರತಿ ರಾಜ್ಯ ಮಂಡಳಿಯು ತಮ್ಮದೇ ಆದ ಯೋಜನೆಯನ್ನು ಹೊಂದಿದೆ. ಇದು ಏಕರೂಪವಾಗಿರಲು ಸಾಧ್ಯವಿಲ್ಲ. ನಾವು ಏಕರೂಪದ ಯೋಜನೆಗಾಗಿ ನಿರ್ದೇಶಿಸಲು ಹೋಗುವುದಿಲ್ಲ. ಪ್ರತಿಯೊಂದು ಮಂಡಳಿಯು ತಮ್ಮದೇ ಆದ ಯೋಜನೆಯನ್ನು ರೂಪಿಸಿಕೊಳ್ಳಬೇಕಾಗುತ್ತದೆ, ’ ಎಂದು ಹೇಳಿದೆ, ಪ್ರತಿ ಮಂಡಳಿಯು ವಿಭಿನ್ನ ಮತ್ತು ಸ್ವಾಯತ್ತವಾಗಿದೆ ಎಂದು ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT