ಎಫ್‌ಐಆರ್ ರದ್ದತಿಗಾಗಿ ಸಲ್ಲಿಸಿದ್ದ ಫೋಕ್ಸ್‌ವ್ಯಾಗನ್ ಅರ್ಜಿ ವಜಾಗೊಳಿಸಿದ ಸುಪ್ರೀಂ

ನವದೆಹಲಿ: ಡೀಸೆಲ್ ಕಾರಿನಲ್ಲಿ ಕಳಪೆ ಸಾಧನ ಜೋಡಿಸಿ ವಂಚಿಸಲಾಗಿದೆ ಎಂದು ಗ್ರಾಹಕರೊಬ್ಬರು ನೀಡಿದ ದೂರನ್ನು ಆಧರಿಸಿ ತಮ್ಮ ಕಂಪನಿ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಜರ್ಮನ್ ಕಾರು ತಯಾರಕಾ ಕಂಪನಿ ಸ್ಕೋಡ ಆಟೊ ಫೋಕ್ಸ್‌ವ್ಯಾಗನ್ ಇಂಡಿಯಾ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ. ರಾಮಸುಬ್ರಮಣಿಯನ್ ಅವರನ್ನೊಳಗೊಂಡ ಪೀಠ, ಕಂಪನಿಯ ಅರ್ಜಿಯನ್ನು ವಜಾಗೊಳಿಸಿದೆ.
ಕಳಪೆ ಗುಣಮಟ್ಟ ಎಂದು ಆರೋಪಿಸುತ್ತಿರುವ ಆ ಸಾಧನ, ಒಂದು ತಂತ್ರಾಂಶವಾಗಿದ್ದು, ಅದನ್ನು ಆಟೊ ಎಂಜಿನ್‌ಗಳಲ್ಲಿ ಮಾಲಿನ್ಯ ಹೊರಸೂಸುವಿಕೆ ಪರೀಕ್ಷೆಯನ್ನು ಬದಲಿಸಲು ಬಳಸಲಾಗುತ್ತದೆ. ಕೆಲವು ವರ್ಷಗಳ ಹಿಂದೆ ಜಾಗತಿಕವಾಗಿ ಫೋಕ್ಸ್‌ವ್ಯಾಗನ್ ಕಂಪನಿ ವಿರುದ್ಧ ಈ ಆರೋಪ ಹೊರಿಸಲಾಗಿತ್ತು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.