ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಪಟುಗಳಿಗೆ ಹೆಚ್ಚಿನ ಸೌಲಭ್ಯ ಅರ್ಜಿ ಪರಿಗಣಿಸಲು ‘ಸುಪ್ರೀಂ’ ನಕಾರ

Last Updated 7 ಸೆಪ್ಟೆಂಬರ್ 2021, 15:24 IST
ಅಕ್ಷರ ಗಾತ್ರ

ನವದೆಹಲಿ: ಅಥ್ಲೆಟಿಕ್‌ ಪಟುಗಳಿಗೆ ಅತ್ಯಾಧುನಿಕ ಸೌಲಭ್ಯ ಕಲ್ಪಿಸಬೇಕು ಮತ್ತು ಕ್ರೀಡಾಪಟುಗಳಿಗೆ ಹೆಚ್ಚಿನ ನೆರವು ಒದಗಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್‌ ಮಂಗಳವಾರ ನಿರಾಕರಿಸಿತು.

‘ತಮಗೆ ಸಮಸ್ಯೆಯ ಅರಿವಿದೆ. ಆದರೆ, ಈ ಸಂಬಂಧ ಸರ್ಕಾರಕ್ಕೆ ಯಾವುದೇ ನಿರ್ದೇಶನ ನೀಡಲಾಗದು’ ಎಂದು ನ್ಯಾಯಮೂರ್ತಿಗಳಾದ ಯು.ಯು.ಲಲಿತ್, ರವೀಂದ್ರ ಭಟ್‌, ಬೇಲಾ ಎಂ.ತ್ರಿವೇದಿ ಅವರಿದ್ದ ನ್ಯಾಯಪೀಠವು ತಿಳಿಸಿತು.

‘ನೀವು ಕ್ರೀಡಾಕ್ಷೇತ್ರದಲ್ಲಿ ಇದ್ದೀರಾ. ವೈಯಕ್ತಿಕ ಆಸಕ್ತಿ ಇರಬೇಕು. ಮೀರಾಭಾಯ್‌ ಚಾನು, ಮೇರಿ ಕೋಂ ಅಂತಹವರು ಪ್ರಚಾರವಿಲ್ಲದೆಯೂ ಎತ್ತರಕ್ಕೆ ಬೆಳೆದಿದ್ದಾರೆ. ಪ್ರೋತ್ಸಾಹ ನೀಡಬೇಕು ಎಂಬುದನ್ನು ಕೋರ್ಟ್‌ ನಿರ್ದೇಶನದಿಂದ ಮಾಡಲಾಗದು. ಅರ್ಜಿಯನ್ನು ವಾಪಸು ಪಡೆಯರಿ, ಇಲ್ಲ ವಜಾ ಮಾಡುತ್ತೇವೆ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.

‘ನಮಗೆಲ್ಲರಿಗೂ ಅನುಕಂಪವಿದೆ, ಅದೇ ಅಭಿಪ್ರಾಯವನ್ನು ಹೊಂದಿದ್ದೇವೆ. ಆದರೆ ಕ್ಷಮಿಸಿ. ಅರ್ಜಿಯನ್ನು ವಾಪಸು ಪಡೆಯಲು ಅರ್ಜಿದಾರರಿಗೆ ಅವಕಾಶ ಕಲ್ಪಿಸಲಿದ್ದೇವೆ’ ಎಂದು ಪೀಠ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT