ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರೋನ್‌ ನಿಷ್ಕ್ರಿಯಗೊಳಿಸಲು ರಬ್ಬರ್‌ ಬುಲೆಟ್‌: ಭದ್ರತಾ ಪಡೆಗಳಿಗೆ ನಿರ್ದೇಶನ

Last Updated 19 ಸೆಪ್ಟೆಂಬರ್ 2021, 12:04 IST
ಅಕ್ಷರ ಗಾತ್ರ

ನವದೆಹಲಿ: ಅತಿ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸುವ ಡ್ರೋನ್‌ಗಳನ್ನು ನಿಷ್ಕ್ರಿಯಗೊಳಿಸಲು ರಬ್ಬರ್‌ ಬುಲೆಟ್‌ಗಳನ್ನು ಉಪಯೋಗಿಸುವಂತೆ ಭದ್ರತಾ ಪಡೆಗಳಿಗೆ ನಿರ್ದೇಶನ ನೀಡಲಾಗಿದೆ.

ವಿಮಾನ ನಿಲ್ದಾಣಗಳು ಮತ್ತು ಪ್ರಮುಖ ಸ್ಥಳಗಳ ರಕ್ಷಣೆಯ ಜವಾಬ್ದಾರಿ ವಹಿಸಿಕೊಂಡಿರುವ ಕೇಂದ್ರೀಯ ಭದ್ರತಾ ಪಡೆಗಳಿಗೆ ಈ ಸೂಚನೆ ನೀಡಲಾಗಿದೆ. ಡ್ರೋನ್‌ಗಳ ಮೂಲಕ ನಡೆಯುವ ದಾಳಿಗಳನ್ನು ತಡೆಯಲು ಸಮರ್ಪಕವಾದ ಅತ್ಯಾಧುನಿಕ ತಂತ್ರಜ್ಞಾನ ಅಭಿವೃದ್ಧಿಪಡಿಸುವವರೆಗೂ ರಬ್ಬರ್‌ ಬುಲೆಟ್‌ಗಳನ್ನು ಬಳಸಬಹುದು ಎಂದು ಸೂಚಿಸಲಾಗಿದೆ.

60ರಿಂದ 100 ಮೀಟರ್‌ಗಳ ಎತ್ತರದಲ್ಲಿ ಹಾರಾಟ ನಡೆಸುವ ಡ್ರೋನ್‌ಗಳ ಮೇಲೆ ರಬ್ಬರ್‌ ಬುಲೆಟ್‌ಗಳನ್ನು ಸಿಡಿಸುವ ಮೂಲಕ ಕೆಳಗಿಳಿಸಬಹುದು ಎನ್ನುವುದನ್ನು ಪ್ರಾಯೋಗಿಕ ಕಾರ್ಯಾಚರಣೆ ಮೂಲಕ ಕಂಡುಕೊಳ್ಳಲಾಗಿದೆ ಎಂದು ಕೇಂದ್ರೀಯ ಶಸ್ತ್ರಾಸ್ತ್ರ ಪೊಲೀಸ್‌ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ (ಸಿಐಎಸ್‌ಎಫ್‌) ಹಲವಾರು ವಿಮಾನ ನಿಲ್ದಾಣಗಳು ಮತ್ತು ಅಣು ವಿದ್ಯುತ್‌ ಸ್ಥಾವರಗಳ ಭದ್ರತೆಯ ಜವಾಬ್ದಾರಿ ವಹಿಸಲಾಗಿದೆ. ಇಂತಹ ಸ್ಥಳಗಳ ಸಮೀಪ ಜನರು ವಾಸಿಸುತ್ತಿರಬಹುದು ಅಥವಾ ವಾಹನಗಳ ಸಂಚಾರವು ಇರುತ್ತದೆ. ಹೀಗಾಗಿ, ಇಂತಹ ಪ್ರದೇಶಗಳಲ್ಲಿ ದಾಳಿ ನಡೆಸಲು ‘ಐಎನ್‌ಎಸ್‌ಎಎಸ್‌’ ರೈಫಲ್‌ಗಳನ್ನು ಬಳಸುವುದರಿಂದ ನಾಗರಿಕರ ಜೀವ ಹಾನಿಗೂ ಆಪತ್ತು ಉಂಟಾಗಬಹುದು. ಹೀಗಾಗಿ, ಈ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಸುಮಾರು 6,300 ಕಿಲೋ ಮೀಟರ್‌ ಗಡಿ ಪ್ರದೇಶದ ಕಾವಲು ಕಾಯುವ ಗಡಿ ಭದ್ರತಾ ಪಡೆಗೆ, ಡ್ರೋನ್‌ಗಳನ್ನು ನಾಶಪಡಿಸಲು ‘ಐಎನ್‌ಎಸ್‌ಎಎಸ್‌’ ರೈಫಲ್‌ಗಳನ್ನು ಬಳಸುವಂತೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT