ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟನೆ ಪ್ರದೇಶದಲ್ಲಿ ಭದ್ರತೆ ಹೆಚ್ಚಳ: ಅನ್ನದಾತನ ಸುತ್ತ ಮೊಳೆಬೇಲಿ

ನೀರು, ವಿದ್ಯುತ್ ಪೂರೈಕೆ ಸ್ಥಗಿತ
Last Updated 2 ಫೆಬ್ರುವರಿ 2021, 20:27 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ರಾಯಿಟರ್ಸ್): ದೆಹಲಿಯ ಮೂರು ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಶಿಬಿರಗಳ ಸುತ್ತ ಪೊಲೀಸರು ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ. ಶಿಬಿರಗಳ ಸುತ್ತ ಕಾಂಕ್ರೀಟ್‌ ಸುರಿದು, ಒಂದು ಅಡಿಗೂ ಹೆಚ್ಚು ಉದ್ದದ ಮೊನಚಾದ ಸಾವಿರಾರು ಸರಳುಗಳನ್ನು ನೆಡಲಾಗಿದೆ. ಪೊಲೀಸರ ಈ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ‘ಇದು ರೈತರ ಮೇಲೆ ಸರ್ಕಾರ ನಡೆಸುತ್ತಿರುವ ಆಕ್ರಮಣ’ ಎಂದು ಕಿಸಾನ್ ಸಂಯುಕ್ತ ಒಕ್ಕೂಟವು ಆರೋಪಿಸಿದೆ. ಕೇಂದ್ರದ ಮೂರು ಕಾಯ್ದೆಗಳ ವಿರುದ್ಧ ಈ ಒಕ್ಕೂಟದ ನೇತೃತ್ವದಲ್ಲಿ ರೈತರು ಎರಡು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ರೈತರ ಶಿಬಿರಗಳ ಸುತ್ತ ಹಲವು ಹಂತದ ಬೇಲಿಗಳನ್ನು ನಿರ್ಮಿಸಲಾಗಿದೆ. ದೆಹಲಿ-ಉತ್ತರಪ್ರದೇಶ ಗಡಿಯ ಗಾಜಿಪುರದಲ್ಲಿ ರೈತರ ಶಿಬಿರದ ಸುತ್ತ ಮೂರು ಅಡಿಗೂ ಹೆಚ್ಚು ಎತ್ತರದ ಕಾಂಕ್ರೀಟ್‌ ಬ್ಲಾಕ್‌ಗಳನ್ನು ಜೋಡಿಸಿ, ಮಧ್ಯೆ ಕಾಂಕ್ರೀಟ್ ಸುರಿಯ
ಲಾಗಿದೆ. ರೈತರು ಪ್ರತಿಭಟನೆ ನಡೆಸುತ್ತಿರುವ ಸ್ಥಳದ ಸುತ್ತ ಸಾವಿರಾರು ಸರಳುಗಳನ್ನು ನೆಡಲಾಗಿದೆ. ಅವುಗಳ ಹಿಂದೆ ಹತ್ತಾರು ಬ್ಯಾರಿಕೇಡ್‌ಗಳನ್ನು ಜೋಡಿಸಲಾಗಿದೆ. ಅವುಗಳ ಸುತ್ತ ಕಂದಕಗಳನ್ನು ತೋಡಲಾಗಿದೆ. ಅವುಗಳ ಹೊರಗೆ ಟ್ರಕ್‌-ಟಿಪ್ಪರ್‌ಗಳನ್ನು ನಿಲ್ಲಿಸಲಾಗಿದೆ.

ಗಾಜಿಪುರ, ಸಿಂಘು ಮತ್ತು ಟಿಕ್ರಿ ಗಡಿಯಲ್ಲಿ ಪೊಲೀಸರು, ಗೃಹರಕ್ಷಕ ದಳದ ಸಿಬ್ಬಂದಿ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಮತ್ತು ಸಿಆರ್‌ಪಿಎಫ್‌ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

ಪೊಲೀಸರ ಸಮರ್ಥನೆ: ಗಡಿಯಲ್ಲಿ ಭದ್ರತೆ ಹೆಚ್ಚಿಸಿರುವುದನ್ನು ದೆಹಲಿ ಪೊಲೀಸರು ಸಮರ್ಥಿಸಿಕೊಂಡಿದ್ದಾರೆ. ‘ಗಣರಾಜ್ಯೋತ್ಸವದ ದಿನ,
ಬ್ಯಾರಿಕೇಡ್‌ಗಳನ್ನು ತುಂಡರಿಸಿದಾಗ, ಪೊಲೀಸರ ಮೇಲೆ ದಾಳಿ ನಡೆಸಿದಾಗ ಯಾರೂ ಅದನ್ನು ಪ್ರಶ್ನಿಸಲಿಲ್ಲ. ನಾವು ಈಗ ಏನು ಮಾಡಬೇಕು? ಈಗ ಮುರಿಯಲಾಗದಂತಹ ಬ್ಯಾರಿಕೇಡ್‌ಗಳನ್ನು ನಿರ್ಮಿಸಿದ್ದೇವೆ’ ಎಂದು ದೆಹಲಿ ಪೊಲೀಸ್ ಆಯುಕ್ತ ಎಸ್‌.ಎನ್‌.ಶ್ರೀವಾಸ್ತವ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT