ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಾರಣೆಗೆ ವರ್ಷಾ ಪುನಃ ಗೈರು

Last Updated 29 ಡಿಸೆಂಬರ್ 2020, 19:32 IST
ಅಕ್ಷರ ಗಾತ್ರ

ಮುಂಬೈ: ಶಿವಸೇನಾ ಮುಖಂಡ ಸಂಜಯ್‌ ರಾವುತ್‌ ಅವರ ಪತ್ನಿ ವರ್ಷಾ ರಾವುತ್‌ ಅವರು ಮಂಗಳವಾರವೂ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಗೈರುಹಾಜರಾಗಿದ್ದಾರೆ.

ಈ ಹಿಂದೆಯೂ ವರ್ಷಾ ಅವರಿಗೆ ಎರಡು ಬಾರಿ ನೋಟಿಸ್‌ ನೀಡಲಾಗಿತ್ತು. ಅನಾರೋಗ್ಯದ ಕಾರಣ ನೀಡಿ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ‘ನಮಗೆ ಇನ್ನಷ್ಟು ಕಾಲಾವಕಾಶ ಕೊಡುವಂತೆ ನಾವು ಮನವಿ ಮಾಡಿಕೊಂಡಿದ್ದೇವೆ’ ಎಂದು ಸಂಜಯ್ ರಾವುತ್‌ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ನೋಟಿಸ್‌ ಬಗ್ಗೆ ಕೇಳಿದ ಪ್ರಶ್ನೆಗೆ, ‘ನಾನಿನ್ನೂ ನೋಟಿಸ್‌ ನೋಡಿಲ್ಲ. ಅದು ನನ್ನ ಬಳಿ ಇಲ್ಲ’ ಎಂದು ರಾವುತ್‌ ಹೇಳಿದರು. ಆದರೆ, ರಾವುತ್‌ ವಿರುದ್ಧ ಆರೋಪಗಳನ್ನು ಮಾಡಿರುವ ಬಿಜೆಪಿಯು, ‘ಪಂಜಾಬ್‌ ಮಹಾರಾಷ್ಟ್ರ ಕೋ–ಆಪರೇಟಿವ್‌ ಬ್ಯಾಂಕ್‌ನ ಸಾಲ ಹಗರಣಕ್ಕೆ ಸಂಬಂಧಿಸಿದಂತೆ ವರ್ಷಾ ಅವರಿಗೆ ನೋಟಿಸ್‌ ನೀಡಲಾಗಿದೆ ಎಂದಿದೆ.

ಇದನ್ನು ನಿರಾಕರಿಸಿರುವ ರಾವುತ್‌, ‘ಈ ಹಗರಣಕ್ಕೂ ನೋಟಿಸ್‌ಗೂ ಸಂಬಂಧವಿಲ್ಲ. ನನ್ನ ಪತ್ನಿ 12 ವರ್ಷಗಳ ಹಿಂದೆ ಮನೆ ಖರೀದಿಗಾಗಿ ಸ್ನೇಹಿತರಿಂದ ಪಡೆದ ₹50 ಲಕ್ಷ ಸಾಲಕ್ಕೆ ಸಂಬಂಧಿಸಿದಂತೆ ನೋಟಿಸ್‌ ನೀಡಲಾಗಿದೆ’ ಎಂದಿದ್ದರು.

‘ನಾನು ರಾಜ್ಯಸಭೆಯ ಸದಸ್ಯ. ಜಾರಿ ನಿರ್ದೇಶನಾಲಯವನ್ನು ಕೆಲವರು ಒತ್ತೆಯಾಳಿನಂತೆ ಇಟ್ಟುಕೊಂಡಿದ್ದರೂ, ನಾನು ಆ ಸಂಸ್ಥೆಯನ್ನು ಗೌರವಿಸುತ್ತೇನೆ. ನಾವೇನೂ ಹೆದರಿಲ್ಲ. ನೋಟಿಸ್‌ಗೆ ಸೂಕ್ತ ಪ್ರತಿಕ್ರಿಯೆ ನೀಡುತ್ತೇವೆ’ ಎಂದು ರಾವುತ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT