ಬುಧವಾರ, ಜುಲೈ 28, 2021
22 °C

ಬಿಜೆಪಿ ಜೊತೆ ಹೊಂದಾಣಿಕೆಗೆ ಮುಂದಾಗಿ: ಠಾಕ್ರೆಗೆ ಶಿವಸೇನಾ ಶಾಸಕನ ಪತ್ರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ (ಪಿಟಿಐ): ಸಮಯ ಮೀರುವ ಮೊದಲೇ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಶಿವಸೇನಾ ಶಾಸಕ ಪ್ರತಾಪ್‌ ಸರ್ನಾಯಕ್‌ ಅವರು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ಮನವಿ ಮಾಡಿದ್ದಾರೆ.

ಈ ಸಂಬಂಧ ಶಾಸಕ ಸರ್ನಾಯಕ್‌ ಅವರು ಠಾಕ್ರೆ ಅವರಿಗೆ ಪತ್ರ ಬರೆದಿದ್ದಾರೆ. ‘ಬಿಜೆಪಿಯೊಂದಿಗೆ ಮೈತ್ರಿ ಕಡಿದು ಹೋಗಿದ್ದರು ಸಹ, ಎರಡೂ ಪಕ್ಷಗಳ ಮುಖಂಡ ನಡುವೆ ಸೌಹಾರ್ದ ಸಂಬಂಧ ಇದೆ. ಹೀಗಾಗಿ, ಸಮಯ ಕಳೆದು ಹೋಗುವ ಮುನ್ನವೇ ಬಿಜೆಪಿಯೊಂದಿಗೆ ಹೊಂದಾಣಿಕೆಗೆ ಮುಂದಾಗಬೇಕು’ ಎಂದು ಮನವಿ ಮಾಡಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಸರ್ನಾಯಕ್‌ ಅವರಿಗೆ ಸೇರಿದ ಕಚೇರಿ, ನಿವಾಸಗಳ ಮೇಲೆ ಕಳೆದ ವರ್ಷ ನವೆಂಬರ್‌ನಲ್ಲಿ ದಾಳಿ ನಡೆಸಿದ್ದರು. ತನಿಖೆಯೂ ನಡೆಯುತ್ತಿದೆ.

‘ಕರ್ಣ ಅಥವಾ ಅಭಿಮನ್ಯುವಿನ ರೀತಿ ಬಲಿದಾನಕ್ಕಿಂತ, ಅರ್ಜುನನ ರೀತಿ ಯದ್ಧ ಮಾಡಬೇಕು ಎಂಬ ಮಾತಿನಲ್ಲಿ ನನಗೆ ನಂಬಿಕೆ ಇದೆ. ಇದೇ ಕಾರಣಕ್ಕೆ, ನನಗೆ ಪಕ್ಷದ ಮುಖಂಡರ ಅಥವಾ ಸರ್ಕಾರದ ಬೆಂಬಲ ಇಲ್ಲದಿದ್ದರೂ ನಾನು ಕಳೆದ ಏಳು ತಿಂಗಳಿನಿಂದ ಕಾನೂನು ಹೋರಾಟ ಮಾಡುತ್ತಿದ್ದೇನೆ’ ಎಂದೂ ಅವರು ಪತ್ರದಲ್ಲಿ ವಿವರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು