ನವದೆಹಲಿ:ಭಾರತವೂ ಸೇರಿ ಕಡಿಮೆ ಮತ್ತು ಮಧ್ಯಮ ವರಮಾನದ ದೇಶಗಳಿಗೆ ಅಗ್ಗದ ಬೆಲೆಯಲ್ಲಿ ಕೋವಿಡ್ ಲಸಿಕೆ ತಯಾರಿಸಲು ‘ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ, ಬಿಲ್ ಮತ್ತು ಮಿಲಿಂಡಾ ಗೇಟ್ಸ್ ಪ್ರತಿಷ್ಠಾನ ಹಾಗೂ ಗ್ಯಾವಿ ಕೋವಾಕ್ಸ್ ಎಎಂಸಿ ಸಂಸ್ಥೆಗಳು ಒಪ್ಪಂದ ಮಾಡಿಕೊಂಡಿವೆ. ಈ ಪ್ರಕಾರ, ಸೆರಂ ಕಂಪನಿಯು 10 ಕೋಟಿ ಡೋಸ್ ಕೋವಿಡ್ ಲಸಿಕೆಗಳನ್ನು ತಯಾರಿಸಲಿದೆ.

ಕೋವಿಡ್ ಲಸಿಕೆಯನ್ನು ಬಡ ರಾಷ್ಟ್ರಗಳಿಗೆ ಉಚಿತವಾಗಿ ಅಥವಾ ಅತ್ಯಂತ ಕಡಿಮೆ ವೆಚ್ಚದಲ್ಲಿ ವಿತರಿ ಸುವುದು ಈ ಒಪ್ಪಂದದ ಉದ್ದೇಶ. ಇದಕ್ಕೆ ಅಗತ್ಯವಿರುವಷ್ಟು ಹಣವನ್ನು ಗೇಟ್ಸ್ ಪ್ರತಿಷ್ಠಾನ ಒದಗಿಸಲಿದೆ. ಗ್ಯಾವಿಯು ಬಡರಾಷ್ಟ್ರಗಳಿಗೆ ಈ ಲಸಿಕೆಗಳನ್ನು ವಿತರಿಸುವ ಕೆಲಸ ಮಾಡ ಲಿದೆ. ಅಗತ್ಯವಿರುವಷ್ಟು ಲಸಿಕೆಗಳನ್ನು ಸೆರಂ ತಯಾರಿಸಲಿದೆ.

ಬಡರಾಷ್ಟ್ರಗಳಿಗೆ ಲಸಿಕೆ ಪೂರೈಕೆಗೆಂದೇ ಸರ್ಕಾರಗಳು, ಖಾಸಗಿ ಕಂಪನಿಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಮಾಡಿ ಕೊಂಡಿರುವ ಒಕ್ಕೂಟ ಗ್ಯಾವಿ. ಗೇಟ್ಸ್ ಪ್ರತಿಷ್ಠಾನವು ಗ್ಯಾವಿಗೆ ದೇಣಿಗೆ ನೀಡಲಿದೆ. ಈ ದೇಣಿಗೆಯನ್ನು ಗ್ಯಾವಿಯು, ಸೆರಂ ಕಂಪನಿಗೆ ಒದಗಿಸಲಿದೆ.

ಲಸಿಕೆ ತಯಾರಿಕಾ ಘಟಕಗಳ ಸಾಮರ್ಥ್ಯ ಹೆಚ್ಚಿಸಲು ಈ ಹಣ ಬಳಸುವುದಾಗಿ ಸೆರಂ ಹೇಳಿದೆ.ಆಸ್ಟ್ರಾಜೆನೆಕಾ ಮತ್ತು ನೋವಾವಾಕ್ಸ್ ಕಂಪನಿಗಳು ಅಭಿವೃದ್ಧಿಪಡಿಸುತ್ತಿರುವ ಕೋವಿಡ್ ಲಸಿಕೆಗಳನ್ನು ತಯಾರಿಸಲು ಸೆರಂ ಒಪ್ಪಂದ ಮಾಡಿ ಕೊಂಡಿದೆ. 2021ರ ಅಂತ್ಯದ ವೇಳೆಗೆ 92 ದೇಶಗಳಿಗೆ 200 ಕೋಟಿ ಡೋಸ್ ಗಳಷ್ಟು ಲಸಿಕೆ ನೀಡಲು ಗುರಿ ಹಾಕಿಕೊಂಡಿದೆ.

₹ 225ಕ್ಕೆ ಒಂದು ಡೋಸ್

ದೇಣಿಗೆ ನೆರವು ದೊರೆಯುತ್ತಿರುವ ಕಾರಣ ಅತ್ಯಂತ ಕಡಿಮೆ ಬೆಲೆಗೆ ಲಸಿಕೆ ತಯಾ ರಿಸಲು ಸೆರಂ ಒಪ್ಪಿಕೊಂಡಿದೆ. ಒಂದು ಡೋಸ್‌ನ ಬೆಲೆ 3 ಡಾಲರ್ (ಅಂದಾಜು ₹ 225) ಮೀರಬಾರದು ಎಂಬ ಗುರಿಯನ್ನು ಸೆರಂ ಹಾಕಿ ಕೊಂಡಿದೆ. ಈ ಹಿಂದೆಯೂ ಕಡಿಮೆ ಬೆಲೆಗೆ ಲಸಿಕೆ ತಯಾರಿಸಿದ ಹೆಗ್ಗಳಿಕೆ ಸೆರಂ ಕಂಪನಿಯದ್ದು.

* ಕೋವಿಡ್–19 ಜಾಗತಿಕ ಹಾವಳಿಯನ್ನು ಎದುರಿಸಲು ಲಸಿಕೆ ತಯಾರಿಸುವ ಜಾಗತಿಕ ಸಹಭಾಗಿತ್ವಕ್ಕೆ ಸೆರಂ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ

–ರೇಣು ಸ್ವರೂಪ್, ಕೇಂದ್ರ ಜೈವಿಕವಿಜ್ಞಾನ ಇಲಾಖೆ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.