ನವದೆಹಲಿ: ಶ್ರದ್ಧಾ ಹತ್ಯೆ ಪ್ರಕರಣದ ತನಿಖೆಯನ್ನು ದೆಹಲಿ ಪೊಲೀಸರಿಂದ ಸಿಬಿಐಗೆ ವರ್ಗಾಯಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ.
ಮಂಗಳವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸತೀಶ್ ಚಂದರ್ ಶರ್ಮಾ ಮತ್ತು ಸುಬ್ರಮಣಿಯನ್ ಪ್ರಸಾದ್ ಅವರಿದ್ದ ಪೀಠ ಈ ಅರ್ಜಿ ಪುರಸ್ಕರಿಸುವಂತಹ ಯಾವುದೇ ಅಂಶವು ನಮಗೆ ಕಂಡಬಂದಿಲ್ಲ ಎಂದಿದೆ.
ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡ ಪೀಠ, ಇದು ಒಂದು ರೀತಿಯ ಪ್ರಚಾರದ ಹಿತಾಸಕ್ತಿ ಮೊಕದ್ದಮೆಯಾಗಿದೆ. ಮೃತ ಪೋಷಕರಿಗೆ ದೆಹಲಿ ಪೊಲೀಸ್ ತನಿಖೆಯ ವಿರುದ್ಧ ಯಾವುದೇ ಆಕ್ಷೇಪವಿಲ್ಲ. ಆದರೆ ನಿಮಗೆ ತನಿಖೆ ಕುರಿತು ಆಕ್ಷೇಪವೇಕೆ ಎಂದು ಕೇಳಿದೆ.
ಈ ರೀತಿ ಪ್ರಕರಣ ವರ್ಗಾವಣೆಗೆ ನಾವು ತನಿಖೆ ನಿಯಂತ್ರಣ ಸಂಸ್ಥೆಯಲ್ಲ ಎಂದು ಹೈಕೋರ್ಟ್ ತಿಳಿಸಿದೆ. ಪ್ರಕರಣದ ಶೇ.80ರಷ್ಟು ವಿಚಾರಣೆ ಮುಗಿದಿದ್ದು, ಎಸಿಪಿ ನೇತೃತ್ವದ 200 ಪೊಲೀಸರ ತಂಡ ತನಿಖೆ ನಡೆಸುತ್ತಿದೆ ಎಂದು ಪೀಠ ತಿಳಿಸಿದೆ.
ವಕೀಲ ಜೋಗಿಂದರ್ ಟುಲಿ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.