ನವದೆಹಲಿ: ಸಹಜೀವನ ನಡೆಸುತ್ತಿದ್ದ ಸಂಗಾತಿಯಿಂದಲೇ ಬರ್ಬರವಾಗಿ ಹತ್ಯೆಗೀಡಾಗಿದ್ದ ಮುಂಬೈ ಮೂಲದ ಕಾಲ್ಸೆಂಟರ್ ಉದ್ಯೋಗಿ ಶ್ರದ್ಧಾ ವಾಲಕರ್ ಅವರ ಮೂಳೆಯ ತುಂಡುಗಳು ಇಲ್ಲಿನ ಮಹರೌಲಿಅರಣ್ಯ ಪ್ರದೇಶದಲ್ಲಿ ದೊರೆತಿದ್ದು, ಅವುಗಳು ಶ್ರದ್ಧಾ ಅವರ ಅಪ್ಪನ ಡಿಎನ್ಎ ಮಾದರಿಗೆ ಹೊಂದಿಕೆಯಾಗುತ್ತಿವೆ ಎಂದು ದೆಹಲಿ ಪೊಲೀಸ್ ಮೂಲಗಳು ಗುರುವಾರ ತಿಳಿಸಿವೆ.

‘ಶ್ರದ್ಧಾ ಅವರ ದೇಹದ ಭಾಗಗಳ ಹುಡುಕಾಟದಲ್ಲಿದ್ದ ಪೊಲೀಸರಿಗೆ ಒಟ್ಟು 13 ಮೂಳೆಯ ತುಂಡುಗಳು ದೊರೆತಿವೆ. ಅವುಗಳನ್ನು ಡಿಎನ್ಎ ಪರೀಕ್ಷೆಗಾಗಿ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಅದರ ವರದಿ ಪೊಲೀಸರ ಕೈಸೇರಿದೆ. ಈ ಮೂಳೆಗಳ ಡಿಎನ್ಎಯು ಶ್ರದ್ಧಾ ಅವರ ತಂದೆ ವಿಕಾಸ್ ವಾಲಕರ್ ಅವರ ಡಿಎನ್ಎಗೆ ಹೊಂದಿಕೆಯಾಗುತ್ತಿವೆ’ ಎಂದು ಮಾಹಿತಿ ನೀಡಿವೆ.

ಮುಂಬೈ ಮೂಲದ ಅಫ್ತಾಬ್ ಪೂನವಾಲಾ ಎಂಬಾತಮೇ 18ರಂದು 26 ವರ್ಷದ ಶ್ರದ್ಧಾಎಂಬ ತನ್ನ ಪ್ರೇಯಸಿಯನ್ನು ಕೊಲೆ ಮಾಡಿದ್ದ. ಬಳಿಕಪೊಲೀಸರ ಕಣ್ಣು ತಪ್ಪಿಸಲು ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದೆಹಲಿಯ ಮೆಹರೌಲಿ ಅರಣ್ಯದಲ್ಲಿಎಸೆದಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಫ್ತಾಬ್ನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.