ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರದಿಂದ ಕರ್ತಾರ್‌ಪುರ ಸಾಹಿಬ್‌ ಕಾರಿಡಾರ್‌ ಆರಂಭ

Last Updated 16 ನವೆಂಬರ್ 2021, 10:12 IST
ಅಕ್ಷರ ಗಾತ್ರ

ನವದೆಹಲಿ/ಚಂಡೀಗಡ: ಕರ್ತಾರ್‌ಪುರ ಸಾಹಿಬ್‌ ಕಾರಿಡಾರ್‌ ಅನ್ನು ಬುಧವಾರದಿಂದ ತೆರೆಯಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪ್ರಕಟಿಸಿದ್ದಾರೆ.

ಸಿಖ್‌ ಧರ್ಮದ ಸ್ಥಾಪಕ ಗುರುನಾನಕ್‌ ದೇವ್‌ ಅವರು ಅಂತಿಮ ಕ್ಷಣಗಳನ್ನು ಕಳೆದ ಸ್ಥಳ ಪಾಕಿಸ್ತಾನದ ಗುರುದ್ವಾರ ದರ್ಬಾರ್‌ ಸಾಹಿಬ್‌ ನಿಂದ ಗುರುದಾಸ್‌ಪುರ ಜಿಲ್ಲೆಯ ದೇರಾ ಬಾಬಾ ನಾನಕ್‌ ದೇಗುಲಕ್ಕೆ ಈ ಕರ್ತಾರ್‌ಪುರ್‌ ಕಾರಿಡಾರ್ ಸಂಪರ್ಕ ಕಲ್ಪಿಸುತ್ತದೆ.

ಗುರುನಾನಕ್‌ ದೇವ್‌ ಅವರ ಜನ್ಮ ದಿನೋತ್ಸವವನ್ನು ನವೆಂಬರ್‌ 19ರಂದು ಗುರುಪುರಬ್‌ ಹೆಸರಿನಿಂದ ಆಚರಿಸಲಾಗುತ್ತದೆ.

ಕಾರಿಡಾರ್‌ ತೆರೆಯುವ ನಿರ್ಧಾರವು ಶ್ರೀ ಗುರು ನಾನಕ್‌ ಮತ್ತು ಸಿಖ್‌ ಧರ್ಮದ ಬಗ್ಗೆ ಪ್ರಧಾನಿ ಮೋದಿಗಿರುವ ಅಪಾರ ಗೌರವವನ್ನು ಸೂಚಿಸುತ್ತದೆ ಎಂದು ಅಮಿತ್‌ ಶಾ ಹೇಳಿದರು.

ಇದಕ್ಕೂ ಮುನ್ನ ಮಂಗಳವಾರ ಕರ್ತಾರ್‌ಪುರ ಕಾರಿಡಾರ್‌ ಪುನಃ ತೆರೆಯುವಂತೆ ಪಂಜಾಬ್‌ ಕಾಂಗ್ರೆಸ್‌ ಮುಖ್ಯಸ್ಥ ನವಜೋತ್‌ ಸಿಂಗ್‌ ಸಿಧು ಮತ್ತು ಮಾಜಿ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಮಂಗಳವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು.

2020 ಮಾರ್ಚ್‌ನಲ್ಲಿ ಕೋವಿಡ್‌ ಹೆಚ್ಚಳದ ಹಿನ್ನೆಲೆ ಭಕ್ತರಿಗೆ ಕರ್ತಾರ್‌ಪುರ ತೀರ್ಥಯಾತ್ರೆಯನ್ನು ನಿಷೇಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT