ಗುರುವಾರ , ಆಗಸ್ಟ್ 18, 2022
25 °C

ಅಮೆರಿಕಕ್ಕೆ 32.4 ಲಕ್ಷ ಡೋಸ್‌ ಲಸಿಕೆ ರಫ್ತು: ಅನುಮೋದನೆ ಕೋರಿದ ಎಸ್‌ಐಐ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌ ಲಸಿಕೆ ಕೋವೊವ್ಯಾಕ್ಸ್‌ನ 32.4 ಲಕ್ಷ ಡೋಸ್‌ಗಳನ್ನು ‘ನುವಾಕ್ಸೊವಿಡ್’ ಹೆಸರಿನಲ್ಲಿ ಅಮೆರಿಕಕ್ಕೆ ರಫ್ತು ಮಾಡಲು ಅನುಮೋದನೆ ನೀಡುವಂತೆ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (ಎಸ್‌ಐಐ) ಕೇಂದ್ರ ಸರ್ಕಾರವನ್ನು ಕೋರಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ.

ಭಾರತದಲ್ಲಿ ತಯಾರಿಸಿ ಅಮೆರಿಕಕ್ಕೆ ರಫ್ತು ಮಾಡುತ್ತಿರುವ ಕೋವಿಡ್‌ ಅಥವಾ ಕೋವಿಡೇತರ ಮೊದಲ ಲಸಿಕೆ ಇದಾಗಲಿದೆ ಎಂದೂ ಹೇಳಿವೆ.

ನಿಗದಿತ ಸಮಯಕ್ಕೆ ಅನುಮೋದನೆ ಲಭಿಸಿದರೆ ಜುಲೈ 3ರಂದು ಲಸಿಕೆ ರವಾನೆಯಾಗುವ ಸಾಧ್ಯತೆ ಇದೆ ಎಂದು ಎಸ್‌ಐಐನ ಸರ್ಕಾರಿ ಮತ್ತು ನಿಯಂತ್ರಣ ವ್ಯವಹಾರಗಳ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

2021 ಡಿಸೆಂಬರ್‌ 28ರಂದು ತುರ್ತು ಪರಿಸ್ಥಿತಿಗಳಲ್ಲಿ ವಯಸ್ಕರಿಗೆ ಕೊವೊವ್ಯಾಕ್ಸ್ ಲಸಿಕೆಯ ನಿರ್ಬಂಧಿತ ಬಳಕೆಗೆ  ಭಾರತೀಯ ಔಷಧ ಮಹಾ ನಿಯಂತ್ರಕರು (ಡಿಸಿಜಿಐ) ಅನುಮೋದನೆ ನೀಡಿದ್ದರು.

ಜೂನ್‌ 29 ರಂದು ತುರ್ತು ಪರಿಸ್ಥಿತಿಗಳಲ್ಲಿ 7ರಿಂದ 11 ವರ್ಷದೊಳಗಿನವರಿಗೆ ಈ ಲಸಿಕೆಯ ನಿರ್ಬಂಧಿತ ಬಳಕೆಗೆ ಅನುಮೋದನೆ ನೀಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು