ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರುಗಳಿಗೆ ಆರು ಏರ್‌ಬ್ಯಾಗ್‌ ಕಡ್ಡಾಯ: ಸಚಿವ ನಿತಿನ್ ಗಡ್ಕರಿ

Last Updated 5 ಆಗಸ್ಟ್ 2022, 13:41 IST
ಅಕ್ಷರ ಗಾತ್ರ

ನವದೆಹಲಿ: ಕಾರುಗಳಲ್ಲಿ ಆರು ಏರ್‌ಬ್ಯಾಗ್‌ ಇರುವುದನ್ನು ಕಡ್ಡಾಯಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಪ್ರತಿ ಏರ್‌ಬ್ಯಾಗ್‌ ದರ ₹ 800 ಆಗಲಿದೆ. ಹೀಗಾಗಿ, ಆಟೊಮೊಬೈಲ್‌ ಉತ್ಪಾದಕರಿಗೆ ಇನ್ನು ಮುಂದೆ ಕಾರುಗಳಲ್ಲಿ ಕಡ್ಡಾಯವಾಗಿ ಆರು ಏರ್‌ಬ್ಯಾಗ್‌ ಅಳವಡಿಸಿ ಸುರಕ್ಷತಾ ಕ್ರಮ ಹೆಚ್ಚಿಸುವಂತೆ ಸೂಚಿಸಲಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ಎಲ್ಲ ಕಾರುಗಳಲ್ಲಿ ಮುಂಭಾಗದ ಎರಡು ಸೀಟುಗಳಿಗೆ ಅನ್ವಯಿಸಿ ಏರ್‌ಬ್ಯಾಗ್‌ ಇರುವುದು ಕಡ್ಡಾಯ. ಆರು ಏರ್‌ಬ್ಯಾಗ್‌ ಕಡ್ಡಾಯಗೊಳಿಸಿ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುವುದು ಎಂದು ರಾಜ್ಯಸಭೆಗೆ ತಿಳಿಸಿದರು.

ಭಾರತದಲ್ಲಿ ಪ್ರತಿವರ್ಷ ಅಪಘಾತಗಳಿಂದ ಲಕ್ಷಕ್ಕೂ ಅಧಿಕ ಜನರು ಸಾಯುತ್ತಿದ್ದಾರೆ. ಇದನ್ನು ತಗ್ಗಿಸುವುದು ಇದರ ಉದ್ದೇಶವಾಗಿದೆ. ಜೊತೆಗೆ ಸುರಕ್ಷತಾ ಮಾರ್ಗದಂಡಗಳಿಗೆ ಅನುಸಾರವಾಗಿ ವಿವಿಧ ಮಾದರಿಯ ಕಾರುಗಳಿಗೆ ಶ್ರೇಣಿಯನ್ನು ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT