ಬುಧವಾರ, ಮಾರ್ಚ್ 29, 2023
24 °C

ಹೆಲಿಕಾಪ್ಟರ್ ಪತನ: ಮೃತರಲ್ಲಿ ಕಾಸರಗೋಡು ಜಿಲ್ಲೆಯ ಸೈನಿಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾಸರಗೋಡು: ಅರುಣಾಚಲ ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನಗೊಂಡು ಮೃತಪಟ್ಟ ಸೈನಿಕರಲ್ಲಿ, ಕಾಸರಗೋಡು ಜಿಲ್ಲೆ ಚೆರುವತ್ತೂರು ಕಿಳಕ್ಕೇಮುರಿ ಗ್ರಾಮದ ಕೆ.ವಿ.ಅಶ್ವಿನ್ (24)ಅವರೂ ಸೇರಿದ್ದಾರೆ.

ಅವರು ಸ್ಥಳೀಯ ಕಟ್ಟಡ ನಿರ್ಮಾಣ ಕಾರ್ಮಿಕ ಅಶೋಕನ್-ಕೆ.ವಿ.ಕೌಸಲ್ಯ ದಂಪತಿ ಪುತ್ರ. ಇವರಿಗೆ ಸಹೋದರಿಯರಾದ ಅಶ್ವತಿ, ಅನಶ್ವರ ಇದ್ದಾರೆ. ನಾಲ್ಕು ವರ್ಷಗಳ ಹಿಂದೆ ಎಲೆಕ್ಟ್ರಾನಿಕ್ ಅಂಡ್ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಎಂಜಿನಿಯರ್ ಆಗಿ ಅಶ್ವಿನ್ ಸೈನ್ಯ ಸೇರಿದ್ದರು.

ರಜೆಗೆ ಊರಿಗೆ ಬಂದಿದ್ದ ಅಶ್ವಿನ್ ಕಳೆದ ತಿಂಗಳಷ್ಟೇ ಕರ್ತವ್ಯಕ್ಕೆ ಮರಳಿದ್ದರು. ಸ್ನೇಹಮಯಿ ವ್ಯಕ್ತಿತ್ವದ ಅಶ್ವಿನ್ ಅವರು ಊರಲ್ಲಿ ಸಾಮಾಜಿಕ, ಸಾಂಸ್ಕೃತಿಕ ವಲಯಗಳಲ್ಲಿ ಸಕ್ರಿಯವಾಗಿದ್ದರು. ಪಾರ್ಥಿವ ಶರೀರವನ್ನು ಭಾನುವಾರ (ಅ.23) ಊರಿಗೆ ತರುವ ನಿರೀಕ್ಷೆಯಿದೆ ಎಂದು ಸಂಬಂಧಿಕರು ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು