ಭಾನುವಾರ, ಮೇ 29, 2022
21 °C
ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದ್ದ ರೂಪಾಂತರ ವೈರಸ್

ರೂಪಾಂತರ ಕೊರೊನಾ ವೈರಸ್ ಭಾರತದಲ್ಲಿ ಪತ್ತೆಯಾಗಿಲ್ಲ; ಡಾ. ವಿ.ಕೆ. ಪಾಲ್

ಪಿಟಿಐ Updated:

ಅಕ್ಷರ ಗಾತ್ರ : | |

ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ. ವಿ.ಕೆ. ಪಾಲ್

ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ಕೊರೊನಾ ವೈರಸ್ ರೂಪಾಂತರ ಪ್ರಕರಣಗಳು ಸೋಮವಾರದವರೆಗೆ ಭಾರತದಲ್ಲಿ ಇರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಆದರೆ ಸರ್ಕಾರವು ಇದರ ಬಗ್ಗೆ ನಿಗಾ ಇಟ್ಟಿದೆ ಎಂದು ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ. ವಿ.ಕೆ. ಪಾಲ್ ಮಂಗಳವಾರ ಹೇಳಿದ್ದಾರೆ.

ವಿಜ್ಞಾನಿಗಳ ಪ್ರಕಾರ, ವೈರಸ್‌ನ ಈ ರೂಪಾಂತರವು ವೇಗವಾಗಿ ಹರಡುತ್ತದೆ ಎಂದು ಅವರು ಹೇಳಿದರು.

ದಕ್ಷಿಣ ಆಫ್ರಿಕಾದ ರೂಪಾಂತರ ಕೊರೊನಾ ವೈರಸ್‌ಗೆ ಕೋವಿಶೀಲ್ಡ್ ಲಸಿಕೆಯ ಪರಿಣಾಮಕಾರಿತ್ವದ ಬಗ್ಗೆ ಉತ್ತರಿಸಿದ ಪಾಲ್, ಲಸಿಕೆಯು ಮಿತಿಗಳನ್ನು ಹೊಂದಿದೆ. ಕೋವಿಶೀಲ್ಡ್ ಸೌಮ್ಯ ಸೋಂಕಿನ ವಿರುದ್ಧ ಕನಿಷ್ಠ ರಕ್ಷಣೆ ನೀಡುತ್ತದೆ ಆದರೆ ಇದು ಇನ್ನೂ ತೀವ್ರವಾದ ರೋಗದ ವಿರುದ್ಧ ಮತ್ತು ಮರಣ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.

'ಈ ರೂಪಾಂತರವನ್ನು ಕಂಡುಹಿಡಿಯಲು ನಮ್ಮಲ್ಲಿ ವ್ಯವಸ್ಥೆ ಇರುವುದರಿಂದ ಈ ಕ್ಷಣಕ್ಕೆ ಯಾವುದೇ ತೊಂದರೆ ಇಲ್ಲ. ನಿನ್ನೆಯವರೆಗೆ, ಈ ನಿರ್ದಿಷ್ಟ ರೂಪಾಂತರ ಪ್ರಕರಣವು ದೇಶದಲ್ಲಿ ವರದಿಯಾಗಿಲ್ಲ. ಆದರೆ ನಾವು ನಿಗಾ ಇಡುತ್ತಿದ್ದೇವೆ. ಹೆಚ್ಚಿನ ಗಮನಹರಿಸಲಾಗುವುದು. ಕೋವಿಡ್-19 ಸಾಂಕ್ರಾಮಿಕದ ದೃಷ್ಟಿಕೋನದಿಂದ ಕಡಿಮೆಯಾಗುತ್ತಿರುವ ಹೊಸ ಪ್ರಕರಣಗಳು ಮತ್ತು ಹೊಸ ಸಾವುಗಳ ವಿಚಾರದಲ್ಲಿ ಲಸಿಕೆಗಳು ಪ್ರಯೋಜನವಾಗಿವೆ ಎಂದು ಪಾಲ್ ಹೇಳಿದರು.

ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳು 'ಅತ್ಯಂತ ಸುರಕ್ಷಿತವಾಗಿವೆ'. ಯಾರೆಲ್ಲ ಲಸಿಕೆ ತೆಗೆದುಕೊಂಡಿಲ್ಲವೋ ಅಂತಹ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿಯ ಕೆಲಸಗಾರರು ಲಸಿಕೆ ಪಡೆಯುವಂತೆ ಒತ್ತಾಯಿಸಿದರು.

ರಾಷ್ಟ್ರವ್ಯಾಪಿ ಕೋವಿಡ್-19 ವ್ಯಾಕ್ಸಿನೇಷನ್ ಕಾರ್ಯಕ್ರಮದ ಪ್ರಗತಿಯ ಕುರಿತು ಮಾತನಾಡಿದ ಅವರು, 'ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ಕಾರ್ಯಗತಗೊಳಿಸುವ ತಂತ್ರ ಮತ್ತು ವ್ಯಾಕ್ಸಿನೇಷನ್ ಅನುಭವವನ್ನು ಜನರೀಗ ಉತ್ತಮವಾಗಿರುವುದಾಗಿ ಹಂಚಿಕೊಂಡಿದ್ದಾರೆ ಎಂದು ನಾವು ವಿಶ್ವಾಸದಿಂದ ಹೇಳಬಹುದು' ಎಂದು ಹೇಳಿದರು.

ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ ಅನ್ನು ದೇಶದಲ್ಲಿ ತುರ್ತು ಬಳಕೆಗೆ ಭಾರತದ ಔಷಧ ನಿಯಂತ್ರಕ ಅನುಮೋದಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು