ಭಾನುವಾರ, ಜೂನ್ 13, 2021
25 °C

ಸ್ಪುಟ್ನಿಕ್–ವಿ ಲಸಿಕೆ: ಜೂನ್ ಮಧ್ಯಭಾಗದಿಂದ ಗ್ರಾಹಕರಿಗೆ ಲಭ್ಯ ಎಂದ ಡಾ. ರೆಡ್ಡೀಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ರಷ್ಯಾದ ಸ್ಪುಟ್ನಿಕ್–ವಿ ಕೋವಿಡ್ ಲಸಿಕೆ ಜೂನ್ ಮಧ್ಯಭಾಗದ ವೇಳೆಗೆ ಭಾರತದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಆ ವೇಳೆಗೆ ಲಸಿಕೆಯ ಸಂಗ್ರಹ ಹೆಚ್ಚಲಿದೆ ಎಂದು ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ತಿಳಿಸಿದೆ.

ಸ್ಪುಟ್ನಿಕ್ ವಿ ಕೋವಿಡ್ ಲಸಿಕೆಯ ಮೊದಲ ಡೋಸ್ ಅನ್ನು ಶುಕ್ರವಾರ ಹೈದರಾಬಾದ್‌ನಲ್ಲಿ ಫಲಾನುಭವಿಯೊಬ್ಬರಿಗೆ ನೀಡಲಾಗಿದೆ. ಆ ಮೂಲಕ ಭಾರತದಲ್ಲಿ ಈ ಲಸಿಕೆಯ ಬಳಕೆಗೆ ಚಾಲನೆ ನೀಡಲಾಗಿದೆ.

ಓದಿ: 

ಒಪ್ಪಂದದ ಪ್ರಕಾರ, ರಷ್ಯಾದ ಸವರಿನ್ ವೆಲ್ತ್ ಫಂಡ್‌ನಿಂದ ಮುಂದಿನ ಕೆಲವು ತಿಂಗಳುಗಳಲ್ಲಿ 3.6 ಕೋಟಿ ಡೋಸ್‌ ಲಸಿಕೆ ದೊರೆಯುವ ನಿರೀಕ್ಷೆ ಇದೆ. ಮೇ ಅಂತ್ಯದೊಳಗೇ ಲಸಿಕೆ ಆಮದು ಮಾಡುವ ಬಗ್ಗೆ ರಷ್ಯಾದ ನೇರ ಹೂಡಿಕೆ ನಿಧಿಯೊಂದಿಗೆ (ಆರ್‌ಡಿಐಎಫ್) ಮಾತುಕತೆ ನಡೆಸುತ್ತಿದ್ದೇವೆ ಎಂದು ಡಾ. ರೆಡ್ಡೀಸ್ ಲ್ಯಾಬೊರೇಟರೀಸ್‌ನ ಅಧಿಕಾರಿ ಎಂ.ವಿ.ರಮಣ ತಿಳಿಸಿದ್ದಾರೆ.

ಸ್ಪುಟ್ನಿಕ್ ವಿ ಲಸಿಕೆಯ ಮೊದಲ ಸರಕು ಮೇ 1 ರಂದು ಭಾರತಕ್ಕೆ ತಲುಪಿತ್ತು. ಪ್ರತಿ ಡೋಸ್‌ಗೆ ಶೇ 5ರಷ್ಟು ಜಿಎಸ್‌ಟಿ ಸೇರಿ ಆಮದಾಗಿರುವ ಲಸಿಕೆಯ ಗರಿಷ್ಠ ಚಿಲ್ಲರೆ ಬೆಲೆ ₹995 ನಿಗದಿಪಡಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು