ಮಂಗಳವಾರ, ಮಾರ್ಚ್ 21, 2023
20 °C

ಕೋವಿಡ್ ಲಸಿಕೆ ಪೂರೈಕೆ ಸಮಸ್ಯೆಯಿದ್ದರೆ ಆಯಾ ರಾಜ್ಯಗಳು ಹೊಣೆ: ಹರ್ಷವರ್ಧನ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್-19 ಲಸಿಕೆ ಪೂರೈಕೆ ಬಗ್ಗೆ ಹಲವಾರು ರಾಜ್ಯಗಳ ನಾಯಕರು ಬೇಜವಾಬ್ದಾರಿ ಹೇಳಿಕೆ ನೀಡಿರುವುದರ ವಿರುದ್ಧ ಗರಂ ಆಗಿರುವ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್, ಯಾವುದೇ ನಿರ್ದಿಷ್ಟ ರಾಜ್ಯದಲ್ಲಿ ಸಮಸ್ಯೆಗಳಿದ್ದರೆ ಆಯಾ ರಾಜ್ಯಗಳು ಹೊಣೆಯಾಗಿದ್ದು, ಲಸಿಕೆ ವಿತರಣೆಯನ್ನು ಸರಿಯಾಗಿ ಯೋಜಿಸಬೇಕು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಹರ್ಷವರ್ಧನ್, 'ಯಾವುದೇ ರಾಜ್ಯದಲ್ಲಿ ಲಸಿಕೆ ಪೂರೈಕೆ ಸಮಸ್ಯೆಯಿದ್ದರೆ ಆಯಾ ರಾಜ್ಯಗಳ ಲೋಪವಾಗಿದೆ. ರಾಜ್ಯಗಳು ಲಸಿಕೆ ಕಾರ್ಯಕ್ರಮ ಉತ್ತಮವಾಗಿ ಯೋಜಿಸುವ ಅಗತ್ಯವಿದೆ. ರಾಜ್ಯಗಳಲ್ಲಿ ಯೋಜನೆ ಹಾಗೂ ವಿತರಣೆಯು ಆಯಾ ರಾಜ್ಯಗಳ ಜವಾಬ್ದಾರಿಯಾಗಿದೆ' ಎಂದು ಹೇಳಿದ್ದಾರೆ.

ಇದನ್ನೂ ಓದಿ: 

 

 

 

ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆ ಇಂತಹ ರಾಜಕೀಯ ಪ್ರೌವೃತ್ತಿಯಿಂದ ಹೊರಬರುವಂತೆ ನಾಯಕರಲ್ಲಿ ಕೋರುತ್ತೇನೆ ಎಂದಿದ್ದಾರೆ.

 

'ಈ ವಿಷಯಗಳ ಬಗ್ಗೆ ಗೊತ್ತಾಗಿಯೂ ನಾಯಕರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದಾದರೆ ಅತ್ಯಂತ ದುರದೃಷ್ಟಕರ. ಅವರಿಗಿದರ ಬಗ್ಗೆ ಅರಿವಿಲ್ಲದಿದ್ದರೆ ಆಡಳಿದತ್ತ ಗಮನ ಹರಿಸಬೇಕು. ಭಯಭೀತಿ ಸೃಷ್ಟಿಸುವ ಬದಲು ಯೋಜನೆಯಲ್ಲಿ ಹೆಚ್ಚಿನ ಶ್ರಮ ವಹಿಸುವಂತೆ ನಾಯಕರನ್ನು ವಿನಂತಿ ಮಾಡುತ್ತೇನೆ' ಎಂದಿದ್ದಾರೆ.

 

 

 

ಕೇಂದ್ರ ಸರ್ಕಾರವು ಕೇಂದ್ರಿಕೃತವಾಗಿ ಲಸಿಕೆ ವಿತರಣೆಯನ್ನು ಪ್ರಾರಂಭಿಸಿದ ಬಳಿಕ ಲಸಿಕೆ ಪ್ರಕ್ರಿಯೆಯ ವೇಗ ಹೆಚ್ಚಿದೆ ಎಂದವರು ಸಮರ್ಥಿಸಿಕೊಂಡಿದ್ದಾರೆ.

 

ಕೇಂದ್ರವು ಶೇಕಡಾ 75ರಷ್ಟು ಲಸಿಕೆಗಳನ್ನು ರಾಜ್ಯಗಳಿಗೆ ಉಚಿತವಾಗಿ ನೀಡಲು ಪ್ರಾರಂಭಿಸಿದ ಬಳಿಕ ಲಸಿಕೆ ಪ್ರಕ್ರಿಯೆಯ ವೇಗ ಹೆಚ್ಚಿದೆ. ಜೂನ್‌ನಲ್ಲಿ 11.50 ಕೋಟಿ ಡೋಸ್‌ಗಳನ್ನು ವಿತರಿಸಲಾಗಿದೆ ಎಂದು ಹೇಳಿದ್ದಾರೆ.

 

 

 

ಲಸಿಕೆ ಕೊರತೆ ಬಗ್ಗೆ ಪಶ್ಚಿಮ ಬಂಗಾಳ, ದೆಹಲಿ, ಗುಜರಾತ್, ಜಾರ್ಖಂಡ್, ಮಹಾರಾಷ್ಟ್ರ, ತಮಿಳುನಾಡು ಹಾಗೂ ಒಡಿಶಾ ರಾಜ್ಯಗಳಿಂದ ದೂರುಗಳು ಕೇಳಿಬಂದಿದ್ದವು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು