ಗುರುವಾರ , ಮಾರ್ಚ್ 30, 2023
32 °C

ಸುಧಾಮೂರ್ತಿಯ ಹೊಸ ಕೃತಿ ದೀಪಾವಳಿಗೆ ಬಿಡುಗಡೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತದ ಪುರಾಣದ ಇತಿಹಾಸದಲ್ಲಿ ಕಳೆದುಹೋಗಿರುವ ಆಕರ್ಷಕ ಕಥನಗಳನ್ನು ಒಳಗೊಂಡ ಸುಧಾಮೂರ್ತಿ ಅವರ ಹೊಸಕೃತಿ ‘ದ ಸೇಜ್‌ ವಿತ್‌ ಟು ಹಾರ್ನ್ಸ್’ ದೀಪಾವಳಿಗೆ ಬಿಡುಗಡೆ ಆಗಲಿದೆ.

ಮಕ್ಕಳನ್ನು ಗುರಿಯಾಗಿಸಿಕೊಂಡು ರಚಿಸಲಾದ ಇದು ಸುಧಾಮೂರ್ತಿ ಅವರ ‘ಅನ್‌ಯೂಷುವಲ್ ಟೇಲ್ಸ್‌ ಫ್ರಂ ಮಿಥಾಲಜಿ’ ಸರಣಿಯಲ್ಲಿ ಐದನೆಯದು. ಪುರಾಣಗಳಲ್ಲಿನ ರಾಜ–ರಾಣಿಯರು, ದೇವರು, ದೇವತೆಯರು, ಋಷಿಗಳು ಅತೀತ ಶಕ್ತಿಯುಳ್ಳ ಮನುಷ್ಯರು ಹೀಗೆ ಆಕರ್ಷಕ ವ್ಯಕ್ತಿತ್ವಗಳನ್ನು ಕೃತಿಯು ಪರಿಚಯಿಸಲಿದೆ.

ಈ ಮೊದಲು ‘ದ ಮ್ಯಾನ್‌ ಫ್ರಂ ದ ಎಗ್’, ‘ಸರ್ಪೆಂಟ್ಸ್ ರಿವೇಂಜ್’, ‘ದ ಅಪ್‌ಸೈಡ್‌ ಡೌನ್‌ ಕಿಂಗ್’ ಮತ್ತು ‘ದ ಡಾಟರ್‌ ಫ್ರಂ ದ ವಿಷಿಂಗ್ ಟ್ರೀ’ ಕೃತಿಗಳು ಪ್ರಕಟವಾಗಿದ್ದವು.

ಐದು ಸಂಪುಟಗಳಲ್ಲಿ ಸುಧಾ ಮೂರ್ತಿ ಅವರು ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆ ಕುರಿತ ವಿವಿಧ ರಾಜ್ಯಗಳ, ವಿವಿಧ ಆವೃತ್ತಿಗಳ ಭಿನ್ನ ಆವೃತ್ತಿಗಳನ್ನು ಪರಿಚಯಿಸುತ್ತಾರೆ.

‘ನೋಡಲು ಭಿನ್ನವಾಗಿದ್ದರೂ, ಇವುಗಳ ಮೂಲ ಎಳೆ ಒಂದೇ ಆಗಿದೆ. ಪುರಾಣಗಳಲ್ಲಿರುವ ಕೆಲ ಪೋಷಕ ಪಾತ್ರಗಳು ತಮ್ಮದೇ ಕಥೆ ಹಾಗೂ ಭಿನ್ನ ಜೀವನ ದೃಷ್ಟಿಕೋನ ಹೊಂದಿವೆ’ ಎಂದು ಸುಧಾಮೂರ್ತಿ ಹೇಳಿದರು.

ಪುಫಿನ್ ಸಂಸ್ಥೆಯ ಪ್ರಕಾಶನದ ಈ ಕೃತಿಗೆ ಪ್ರಿಯಂಕರ್ ಗುಪ್ತಾ ಚಿತ್ರಕಲೆ ಒದಗಿಸಿದ್ದಾರೆ. ಪೆಂಗ್ವಿನ್‌ ರ‍್ಯಾಂಡಮ್‌ ಹೌಸ್ ಇಂಡಿಯಾದ ಸಹ ಪ್ರಕಾಶಕಿಯಾಗಿರುವ ಸೋಹಿನಿ ಮಿತ್ರಾ ಅವರು, ದೀಪಾವಳಿಯ ಸಂಭ್ರಮಾಚರಣೆಗೆ ಇದೊಂದು ಉತ್ತಮ ಕೊಡುಗೆ. ಹಬ್ಬದ ಉತ್ಸಾಹವನ್ನು ಹೆಚ್ಚಿಸಲಿದೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು