ಶನಿವಾರ, ಮಾರ್ಚ್ 25, 2023
29 °C

ಸಚಿವ ಸತ್ಯೇಂದ್ರ ಜೈನ್‌ಗೆ ₹60 ಕೋಟಿ ನೀಡಿಕೆ: ಹೇಳಿಕೆ ಪುನರುಚ್ಚರಿಸಿದ ಸುಕೇಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಜೈಲಿನಲ್ಲಿ ರಕ್ಷಣೆಗಾಗಿ ಹಾಗೂ ರಾಜ್ಯಸಭಾ ಸದಸ್ಯತ್ವಕ್ಕಾಗಿ ಎಎ‍ಪಿ ಸಚಿವ ಸತ್ಯೇಂದ್ರ ಜೈನ್‌ಗೆ ₹60 ಕೋಟಿ ಹಣ ಪಾವತಿಸಿರುವುದಾಗಿ ಲೆಫ್ಟಿನೆಂಟ್ ಜನರಲ್‌ ವಿ.ಕೆ.ಸಕ್ಷೇನಾ ರಚಿಸಿರುವ ಸಮಿತಿಯ ಮುಂದೆ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಪುನರುಚ್ಚರಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಜಾರಿ ನಿರ್ದೇಶನಾಲಯ ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ಸತ್ಯೇಂದ್ರ ಜೈನ್ ಅವರ ವಿರುದ್ಧ ಮಾಡಿರುವ ಆರೋಪಗಳ ತನಿಖೆ ನಡೆಸಲು ದೆಹಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ (ಗೃಹ) ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.

ಸಮಿತಿಯ ಸದಸ್ಯರು ಮಂಡೋಲಿ ಜೈಲಿನಲ್ಲಿ ಚಂದ್ರಶೇಖರ್ ಅವರನ್ನು ಭೇಟಿಯಾಗಿ ನವೆಂಬರ್ 14-15 ರಂದು ಹೇಳಿಕೆ ದಾಖಲಿಸಿದ್ದಾರೆ. ಸಮಿತಿಯು ಸಲ್ಲಿಸಿದ ವರದಿಯ ಪ್ರಕಾರ, ಚಂದ್ರಶೇಖರ್ ಅವರು ಸತ್ಯೇಂದ್ರ ಜೈನ್‌ಗೆ ₹ 60 ಕೋಟಿ ನೀಡಿದ್ದು, ಇದರಲ್ಲಿ ಎಎಪಿಯಿಂದ ರಾಜ್ಯಸಭಾ ಸ್ಥಾನ ಪಡೆಯಲು ₹ 50 ಕೋಟಿ ಮತ್ತು ಜೈಲಿನಲ್ಲಿ ರಕ್ಷಣೆಗಾಗಿ ₹ 10 ಕೋಟಿ ನೀಡಲಾಗಿದೆ. ಆಗಿನ ಮಹಾನಿರ್ದೇಶಕ (ಜೈಲು) ಸಂದೀಪ್ ಗೋಯೆಲ್ ಅವರಿಗೆ ₹12.50 ಕೋಟಿ ಪಾವತಿಸಲಾಗಿದೆ ಎಂದು ಹೇಳಲಾಗಿದೆ.

ಜೈನ್ ಹಾಗೂ ತನ್ನ ನಡುವೆ ನಡೆದ ಹಣದ ವಿತರಣೆ, ಸಮಯ, ಸ್ಥಳದ ಮಾಹಿತಿಗಳು ತನ್ನ ವಾಟ್ಸ್‌ಆ್ಯಪ್‌ನಲ್ಲಿ ಇವೆ. ತನಿಖಾ ಸಂಸ್ಥೆಗಳಿಗೆ ಅಗತ್ಯವಿದ್ದರೆ ಈ ಪುರಾವೆಗಳನ್ನು ಒದಗಿಸಲಾಗುವುದು. ಜೈನ್ ಅವರ ಫೋನ್ ಮೂಲಕ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರೊಂದಿಗೆ ಮಾತುಕತೆ ನಡೆಸಿ ಅವರು ಪಾವತಿಸಿದ ಹಣದ ಕಂತುಗಳ ವಿತರಣೆಯನ್ನು ಖಚಿತಪಡಿಸಿಕೊಳ್ಳಲಾಗಿದೆ ಎಂದು ಆರೋಪಿ ಸುಕೇಶ್‌ ಹೇಳಿಕೊಂಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು